ಸಸಿಹಿತ್ಲು: ನೀರು‌ ಪಾಲದ ಇಬ್ಬರಲ್ಲಿ ಓರ್ವನ ‌ಶವ ಪತ್ತೆ

ಮಂಗಳೂರು: ಜುಲೈ 7ರಂದು‌ ಭಾನುವಾರ ಮಂಗಳೂರಿನ ಸಸಿಹಿತ್ಲು ಬೀಚ್ನಲ್ಲಿ ಸಮುದ್ರಪಾಲಾಗಿದ್ದ ಇಬ್ಬರಲ್ಲಿ ಓರ್ವನ ಶವ ಸೋಮವಾರ ಪತ್ತೆಯಾಗಿದೆ. ಪತ್ತೆಯಾದ ಶವವನ್ನು ಬಜ್ಪೆ ಸಿದ್ಧಾರ್ಥ ನಗರ ನಿವಾಸಿ ಸುಜಿತ್ ಅವರದ್ದು ಎಂದು ಗುರುತಿಸಲಾಗಿದೆ.‌ ಸಸಿಹಿತ್ಲು ಸಮೀಪ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಂದಿದ್ದ ಏಳು ಮಂದಿಯ ತಂಡದ ನಾಲ್ವರು ಯುವಕರು ನಿನ್ನೆ ಸಮುದ್ರಕ್ಕಿಳಿದಿದ್ದರು. ಈ ವೇಳೆ ಇಬ್ಬರು ಅಲೆಗೆ ಸಿಲುಕಿ ನಾಪತ್ತೆಯಾಗಿದ್ದರು‌. ಈ ಕುರಿತು ಸುರತ್ಕಲ್ ಪೊಲೀಸರು ಪ್ರಕರಣ ದಾಖಲಾಗಿದೆ.