ವಿಶ್ವದಲ್ಲೇ ಅತಿದೊಡ್ಡ ಸಕ್ಕರೆ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ: 40 ಸಾವಿರ ಕೋಟಿ ರೂ. ವಿದೇಶಿ ವಿನಿಮಯ ಗಳಿಕೆ
ನವದೆಹಲಿ: ಭಾರತವು ವಿಶ್ವದ ಅತಿದೊಡ್ಡ ಸಕ್ಕರೆ ಉತ್ಪಾದಕ ಮತ್ತು ಎರಡನೇ ಅತಿದೊಡ್ಡ ರಫ್ತುದಾರನಾಗಿ ಹೊರಹೊಮ್ಮಿದೆ. ಸಕ್ಕರೆ ಋತು 2021-22 ರಲ್ಲಿ, ದೇಶದಲ್ಲಿ ಐದು ಸಾವಿರ ಲಕ್ಷ ಮೆಟ್ರಿಕ್ ಟನ್ಗಳಿಗಿಂತ ಹೆಚ್ಚು ಕಬ್ಬು ಉತ್ಪಾದನೆಯಾಗಿದೆ. ಈ ಪೈಕಿ 35 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯನ್ನು ಎಥೆನಾಲ್ ಉತ್ಪಾದನೆಗೆ ಬಳಸಲಾಗಿದ್ದು, 359 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯನ್ನು ಕಾರ್ಖಾನೆಗಳು ಉತ್ಪಾದಿಸಿವೆ. ಈ ಋತುವು ಭಾರತೀಯ ಸಕ್ಕರೆ ವಲಯಕ್ಕೆ ಪರ್ವಕಾಲವೆಂದು ಸಾಬೀತಾಗಿದೆ. 109 ಲಕ್ಷ ಮೆಟ್ರಿಕ್ ಟನ್ಗಿಂತಲೂ ಹೆಚ್ಚಿನ ಸಕ್ಕರೆ ರಫ್ತಾಗಿ […]