ಕಡಿಯಾಳಿ ತಿರುಗುವ ಮುಚ್ಚಿಗೆ ಖ್ಯಾತಿಯ ಕಾಷ್ಟಶಿಲ್ಪಿ ಸುದರ್ಶನ ಆಚಾರ್ಯರಿಗೆ ಕಾಷ್ಟಶಿಲ್ಪರತ್ನ ಪ್ರಶಸ್ತಿ
ಉಡುಪಿ: ಬೆಂಗಳೂರಿನ ವಿಶ್ವಕರ್ಮ ಕಾಷ್ಠಶಿಲ್ಪ ಸಭಾ ಯಲಹಂಕ ಇದರ ದಶಮಾನೋತ್ಸವದ ಪ್ರಯುಕ್ತ ನವೆಂಬರ್ 6 ರವಿವಾರದಂದು ಡಾ.ಬಿ.ಆರ್.ಅಂಬೇಡ್ಕರ್ ಭವನ ಯಲಹಂಕದಲ್ಲಿ “ವಿಕಾಸ ಸಂಭ್ರಮ-2022” ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಂಸ್ಥೆಯು ನೀಡುವ ಕಾಷ್ಠಶಿಲ್ಪರತ್ನ ಪ್ರಶಸ್ತಿಗೆ ಕಡಿಯಾಳಿ ದೇವಸ್ಥಾನದ ತಿರುಗುವ ಮುಚ್ಚಿಗೆ ನಿರ್ಮಾತೃ ಖ್ಯಾತ ಕಾಷ್ಠಶಿಲ್ಪಿ, ರಥ ಶಿಲ್ಪಿ ಸುದರ್ಶನ ಆಚಾರ್ಯ ಆಯ್ಕೆಯಾಗಿದ್ದಾರೆ. ಇವರೊಂದಿಗೆ ಕಾಷ್ಠಶಿಲ್ಪದಲ್ಲಿ ವಿಶೇಷ ಸಾಧನೆ ಮಾಡಿದ ಶಿಲ್ಪಿ ಚಂದ್ರಯ್ಯ ಆಚಾರ್ಯ ಕಳಿ, ಶಿಲ್ಪಿ ರಾಜಗೋಪಾಲ್ ಆಚಾರ್ಯ ಕೋಟೇಶ್ವರ, ಶಿಲ್ಪಿ ಹರೀಶ್ ಆಚಾರ್ಯ ಕಲ್ಲಮುಂಡ್ಕೂರು, ಬಂಬ್ರಾಣ ಯಜ್ಞೇಶ್ ಆಚಾರ್ಯ […]