ಜೆಡ್ಡಾದಲ್ಲಿ ಮತ್ತೊಂದು ಸುತ್ತಿನ ಶಾಂತಿ ಮಾತುಕತೆ ಆರಂಭ : ಮುಂದುವರಿದ ಸುಡಾನ್​ ಸಂಘರ್ಷ

ಖಾರ್ಟೂಮ್ (ಸುಡಾನ್) : ಸುಡಾನ್​ನಲ್ಲಿ ಸಶಸ್ತ್ರ ಸಂಘರ್ಷ ಮುಂದುವರೆದಿರುವ ಮಧ್ಯೆ, ಸುಡಾನ್ ಸಶಸ್ತ್ರ ಪಡೆಗಳು (ಎಸ್ ಎಎಫ್) ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳು (ಆರ್ ಎಸ್ ಎಫ್) ಹೊಸ ಸುತ್ತಿನ ಶಾಂತಿ ಮಾತುಕತೆ ಪುನರಾರಂಭಿಸಲು ಮುಂದಾಗಿವೆ.ಶಾಂತಿ ಮಾತುಕತೆಗಾಗಿ ಎರಡೂ ಕಡೆಗಳ ನಿಯೋಗಗಳು ಸೌದಿ ಅರೇಬಿಯಾದ ಬಂದರು ನಗರ ಜೆಡ್ಡಾಗೆ ಆಗಮಿಸಿವೆ.ಸುಡಾನ್ ಸಂಘರ್ಷ ಕೊನೆಗಾಣಿಸಲು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮತ್ತೊಂದು ಸುತ್ತಿನ ಮಾತುಕತೆಗಳು ಆರಂಭವಾಗಿವೆ. ಏಪ್ರಿಲ್ 15 ರಿಂದ, ಎಸ್‌ಎಎಫ್ ಮತ್ತು ಆರ್​ಎಸ್‌ಎಫ್ ಬಣಗಳು ರಾಜಧಾನಿ ಖಾರ್ಟೂಮ್ […]