ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರಿಂದ ಅಲೋಜೆನಿಕ್ ಅಸ್ಥಿಮಜ್ಜೆಯ ಕಸಿ ಯಶಸ್ವಿ; ಕರಾವಳಿ ಕರ್ನಾಟಕದಲ್ಲೇ ಪ್ರಥಮ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಕ್ಕಳ ರಕ್ತಶಾಸ್ತ್ರ  ಮತ್ತು ಆಂಕೊಲಾಜಿ ವಿಭಾಗದ ವೈದ್ಯರ ತಂಡವು ರೋಗನಿರೋಧಕ ಅಸ್ವಸ್ಥತೆ (ಹಿಮೋಫಾಗೊಸೈಟಿಕ್ ಲಿಂಫೋಹಿಸ್ಟಿಯೊಸೈಟೋಸಿಸ್) ಯಿಂದ ಬಳಲುತ್ತಿದ್ದ ಬಾಲಕಿಗೆ ಕರಾವಳಿಯಲ್ಲೇ  ಮೊದಲ ಬಾರಿಗೆ ಯಶಸ್ವಿಯಾಗಿ  ಅಲೋಜೆನಿಕ್ ಅಸ್ಥಿಮಜ್ಜೆಯ ಕಸಿ  ನಿರ್ವಹಿಸಿದೆ. ಚಿತ್ರದುರ್ಗದ ಎರಡುವರೆ ವರ್ಷದ ಬಾಲಕಿ  ಜ್ವರ ಮತ್ತು ದುಗ್ಧರಸ ಗ್ರಂಥಿಗಳ ಹಿಗ್ಗುವಿಕೆಯ ತೊಂದರೆಯಿಂದ ಬಳಲುತ್ತಿದ್ದಳು , ಹೆಚ್ಚಿನ ಚಿಕಿತ್ಸೆಗೆ  ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಕರೆ ತಂದಿದ್ದರು. ಕೆಲವು ವರ್ಷಗಳ ಹಿಂದೆ ಇಂತದೇ  ವೈದ್ಯಕೀಯ ತೊಂದರೆಗಳಿಂದ  ಅವಳು […]