ಪ್ರಾಣವನ್ನೂ ಲೆಕ್ಕಿಸದೆ ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪಿಯ ಹೆಡೆ ಮುರಿ ಕಟ್ಟಿದ ಕೇರಳದ ಸಿಂಘಂ ಬಗ್ಗೆ ವ್ಯಾಪಕ ಮೆಚ್ಚುಗೆ
ತಿರುವನಂತಪುರಂ: ಇಲ್ಲಿನ ಆರೋಪಿಯೊಬ್ಬ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಮೇಲೆ ತಲವಾರಿನಿಂದ ಹಲ್ಲೆ ಮಾಡುತ್ತಿದ್ದು, ಅದನ್ನು ಸಮರ್ಥವಾಗಿ ಎದುರಿಸಿ, ಆರೋಪಿಯನ್ನು ಹೆಡೆಮುರಿ ಕಟ್ಟಿ ಪೊಲೀಸ್ ಜೀಪಿನಲ್ಲಿ ತಳ್ಳುತ್ತಿರುವ ವಿಡಿಯೋ ದೃಶ್ಯವೊಂದು ವೈರಲ್ ಆಗಿದ್ದು, ವಿಡೀಯೋದಲ್ಲಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನ ಸಮಯೋಚಿತ ಕ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಆರೋಪಿ ಮಚ್ಚಿನಿಂದ ಹಲ್ಲೆ ನಡೆಸುತ್ತಿದ್ದರೂ ಪ್ರಾಣವನ್ನೂ ಲೆಕ್ಕಿಸದೆ ಆತನ ಕೈಯಿಂದ ಮಚ್ಚು ಕಸಿದು, ಆತನನ್ನು ಬಂಧಿಸಿದ ಸಬ್ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಕೇರಳ ಸಿಂಘಂ ಆಗಿ ಹೊರಹೊಮ್ಮಿದ್ದಾರೆ. ಕರ್ತವ್ಯದಲ್ಲಿದ್ದ ಪೊಲೀಸ್ […]