ಇಮ್ಮಡಿ ದೇವರಾಯನ ಕಾಲದ ಶಿಲಾ ಶಾಸನ ಪತ್ತೆ
ಕುಂದಾಪುರ: ಕಲ್ಯಾಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುತೋನ್ಸೆ ಗ್ರಾಮದ ಕೆಮ್ಮಣ್ಣು ಮತ್ತು ನಡಂಬಳ್ಳಿ ನಡುವಿನ ಮೂಡಲಕಟ್ಟೆಯಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ ಇಮ್ಮಡಿ ದೇವರಾಯನ ಕಾಲದ ಶಿಲಾ ಶಾಸನ ಪತ್ತೆಯಾಗಿದೆ. ಮೂರು ಅಡಿ ಎತ್ತರ ಮತ್ತು ಎರಡು ಅಡಿ ಅಗಲವಿರುವ, ಸಂಪೂರ್ಣವಾಗಿ ಸವೆದು ಹೋಗಿರುವ ಸ್ಥಿತಿಯಲ್ಲಿರುವ ಗ್ರಾನೈಟ್ ಕಲ್ಲಿನಿಂದ ಮಾಡಲ್ಪಟ್ಟಿರುವ ಈ ಶಾಸನವನ್ನು ಕನ್ನಡ ಭಾಷೆಯಲ್ಲಿ ಬರೆಯಲಾಗಿದೆ. ಒಟ್ಟು 24 ಸಾಲುಗಳಿವೆ. ಶಾಸನವು ‘ಶ್ರೀ ಗಣಾಧಿಪತಯೇ ನಮಃ’ ಶ್ಲೋಕದಿಂದ ಪ್ರಾರಂಭವಾಗುತ್ತದೆ ಮತ್ತಿದು ಕ್ರಿ.ಶ 1353 ಅಥವಾ 1431 ವರ್ಷಗಳ […]