ಉಡುಪಿ: ಚರಂಡಿಗಳಿಗೆ ಕಸ, ಕಡ್ಡಿ, ಪ್ಲಾಸ್ಟಿಕ್‌ಗಳನ್ನು ಎಸೆಯದಂತೆ ಸೂಚನೆ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಬನ್ನಂಜೆ ವಾರ್ಡಿನ ಮಠದಬೆಟ್ಟು ಕಿಂಡಿ ಅಣಿಕಟ್ಟಿನಲ್ಲಿ ಜೂನ್ 28 ರಂದು ಭಾರಿ ಪ್ರಮಾಣದ ಕಸ, ಮರ ಹಾಗೂ ಮರದ ರೆಂಬೆ ಕೊಂಬೆಗಳು ಬಂದು ಕಿಂಡಿ ಅಣಿಕಟ್ಟಿನ ಹತ್ತಿರ ಬ್ಲಾಕ್ ಆಗಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿರುತ್ತದೆ. ಅದರಂತೆ ನಗರಸಭೆಯಿಂದ ಸ್ಥಳ ಪರಿಶೀಲಿಸಲಾಗಿ ಸದರಿ ಪ್ರದೇಶದಲ್ಲಿ ಬ್ಲಾಕ್ ಆಗಿದ್ದ ಮರದ ರಾಶಿಗಳನ್ನು ಪೌರಕಾರ್ಮಿಕರಿಂದ ತೆರವುಗೊಳಿಸಲು ನೀರಿನ ರಭಸ ಹೆಚ್ಚಿದ್ದರಿಂದ ಅಸಾಧ್ಯವಾಗಿರುತ್ತದೆ. ಆದ್ದರಿಂದ ನಗರಸಭೆಯ ಜೆ.ಸಿ.ಬಿ.ಯನ್ನು ಬಳಸಿ ಸಂಜೆಯ ವೇಳೆಗೆ ಸಿಕ್ಕಿ ಹಾಕಿಕೊಂಡಿದ್ದ ಮರದ […]