ನಾನು ಆ ರೀತಿಯ ಹೇಳಿಕೆ ನೀಡಿಲ್ಲ: ಉಡುಪಿಯಲ್ಲಿ ಪ್ರಣವಾನಂದ ಸ್ವಾಮೀಜಿ ಸ್ಪಷ್ಟನೆ

ಉಡುಪಿ: ಶರಣಬಸವೇಶ್ವರ ಮಠಾಧಿಪತಿ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ಅವರು ಅಲ್ಪಸಂಖ್ಯಾತರಿಗೆ ಶೇಂದಿ ಮಾರಾಟ ಮಾಡಬಾರದೆಂದು ಹೇಳಿದ್ದಾರೆ ಎಂದು ಕೆಲವು ಸುದ್ದಿ ಮಾಧ್ಯಮಗಳು ವರದಿ ಬಿಸ್ತರಿಸಿವೆ. ಈ ಹೇಳಿಕೆಗೆ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಣವಾನಂದ ಶ್ರೀಗಳು, ಇದೊಂದು ಸತ್ಯಕ್ಕೆ ದೂರವಾದ ವಿಚಾರ. ನಾನು ಎಲ್ಲಿಯೂ ಅಂತಹ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಮೂರ್ತೆದಾರಿಕೆ ಮಾಡುವ ಜನಾಂಗಕ್ಕೆ ಸರ್ಕಾರದಿಂದ ಹೆಚ್ಚಿನ ಉತ್ತೇಜನ ಸಿಗಬೇಕು. ಶೇಂದಿ ಮಾರಾಟ ಕೇಂದ್ರ ತೆರಬೇಕು ಎಂದು ಹೇಳಿದ್ದೆ. ಆದರೆ ಅದನ್ನು ತಿರುಚಿ ಈ ರೀತಿಯ […]