ನಾಳೆಯಿಂದ ಎಸೆಸ್ಸೆಲ್ಸಿ ಎಕ್ಸಾಂಗೆ ರಾಜ್ಯ ರೆಡಿ: ಪರೀಕ್ಷೆ ಬರೆಯಲಿದ್ದಾರೆ 8,48,203 ವಿದ್ಯಾರ್ಥಿಗಳು
ಬೆಂಗಳೂರು: ಲಾಕ್ ಡೌನ್ ನಿಂದ ಮುಂದೂಡಲಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಜೂ.25 ರಿಂದ ಆರಂಭವಾಗಲಿದ್ದು, ಪರೀಕ್ಷಾ ಕೊಠಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಭರದಿಂದ ಸಾಗಿದೆ. ರಾಜ್ಯದಲ್ಲಿ 3,209 ಪರೀಕ್ಷಾ ಕೇಂದ್ರಗಳಲ್ಲಿ 8,48,203 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸುಮಾರು 1 ಲಕ್ಷ ಮಂದಿ ವಿವಿಧ ಹಂತಗಳಲ್ಲಿ ಪರೀಕ್ಷಾ ಮೇಲ್ವಿಚಾರಣೆ ಹಾಗೂ ವ್ಯವಸ್ಥೆಗೆ ಸಹಕರಿಸಲಿದ್ದಾರೆ. ಸೋಂಕು ಹರಡುವುದನ್ನು ತಡೆಗಟ್ಟಲು ಪೋಷಕರಿಗೆ ಮನವರಿಕೆ: ಪೋಷಕರಿಗೆ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಬಗ್ಗೆ 9 ಲಕ್ಷ ಕರಪತ್ರಗಳನ್ನು ವಿತರಿಸಿ, ಅವರು ಪಾಲಿಸಬೇಕಾದ ನಿಯಮಗಳ ಬಗ್ಗೆ ಮನವರಿಕೆ […]