ಸರ್ಕಲ್ ಮಟ್ಟದ ಅಂಚೆ ಚೀಟಿ ವಿನ್ಯಾಸ ಸ್ಪರ್ಧೆ: ಕು.ದೀಪಿಕಾ ಭಟ್ಟ್ ಗೆ ಪ್ರಮಾಣ ಪತ್ರ
ಉಡುಪಿ: ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಕರ್ನಾಟಕ ಸರ್ಕಲ್ ಮಟ್ಟದ ಅಂಚೆ ಚೀಟಿ ವಿನ್ಯಾಸದ ಸ್ವರ್ಧೆಯಲ್ಲಿ ವಿಜೇತಳಾದ ಕು.ದೀಪಿಕಾ ಭಟ್ಟ್ ಗೆ ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಸುರೇಶ್ ಗುಪ್ತಾ ಇವರು ಸ್ಮರಣಿಕೆ ಮತ್ತು ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಉಡುಪಿ ಅಂಚೆ ಅಧೀಕ್ಷಕ ನವೀನ್ ಚಂದರ್ ಮೂಳೂರು ಮತ್ತು ಉಡುಪಿ ಪ್ರಧಾನ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಗುರು ಪ್ರಸಾದ್ ಉಪಸ್ಥಿತರಿದ್ದರು.