ಅಂಚೆ ಚೀಟಿ ಸಂಗ್ರಹ ಹವ್ಯಾಸವಿರುವ ಮಕ್ಕಳಿಗೆ ಗುಡ್ ನ್ಯೂಸ್

ಉಡುಪಿ: ಭಾರತೀಯ ಅಂಚೆ ಇಲಾಖೆಯು ದೀನ್ ದಯಾಳ್ (ಸ್ಪರ್ಷ್)   ಯೋಜನೆಯ ಮೂಲಕ ಅಂಚೆ ಚೀಟಿ ಸಂಗ್ರಹಣಾ ಅಭಿರುಚಿ ಮತ್ತು ಅಂಚೆ ಚೀಟಿಯ ಸಂಶೋಧನಾ ಪ್ರವೃತ್ತಿಗೆ ಪ್ರೋತ್ಸಾಹಧನ, ಎಳೆ ವಯಸ್ಸಿನಲ್ಲೇ ದೀರ್ಘ ಕಾಲಿಕ ಪರಿಣಾಮ ಬೀರಬಹುದಾದ ಮತ್ತು  ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗುವ ರೀತಿಯಲ್ಲಿ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹಣಾ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ 6 ನೇ ತರಗತಿಯಿಂದ 9 ನೇ ತರಗತಿಯವರೆಗೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು 2018-19 ರ ಶೈಕ್ಷಣಿಕ ಪರೀಕ್ಷೆಯಲ್ಲಿ […]