ಕುಂಜಾರುಗಿರಿ: ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರಿಂದ ಭಕ್ತರಿಗೆ ಉಚಿತ ರಾಷ್ಟ್ರಧ್ವಜ ವಿತರಣೆ
ಉಡುಪಿ: ಶ್ರೀ ಕ್ಷೇತ್ರ ಕುಂಜಾರುಗಿರಿ ದುರ್ಗಾ ದೇವಸ್ಥಾನದಲ್ಲಿ, ಚಾತುರ್ಮಾಸ ವೃತ ಸಂಕಲ್ಪಿತರಾದ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು, ಭಾರತದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವ ‘ಹರ್ ಘರ್ ತಿರಂಗಾ’ ಕಾರ್ಯಕ್ರಮದ ಅಂಗವಾಗಿ ಗಿರಿಬಳಗದ ವತಿಯಿಂದ ಉಚಿತವಾಗಿ ರಾಷ್ಟ್ರಧ್ವಜವನ್ನು ಭಕ್ತರಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಬಂಧಕರಾದ ರಾಜೇಂದ್ರ ರಾವ್, ಗಿರಿಬಳಗದ ಅಧ್ಯಕ್ಷರಾದ ಪುಂಡರೀಕಾಕ್ಷ ಭಟ್ ಮತ್ತು ಸದಸ್ಯರು ಉಪಸ್ಥಿತರಿದ್ದರು.