ಪ್ರೇಮಿಗಳ ದಿನಾಚರಣೆಗೆ ಶ್ರೀರಾಮಸೇನೆ ವಿರೋಧ

ಉಡುಪಿ: ಸಮಾಜದಲ್ಲಿ ಮಾತೆಯರ ಗೌರವಕ್ಕೆ ಚ್ಯುತಿ ಮಾಡುವಂತಹ ಪಾಶ್ಚಾತ್ಯ ಸಂಸ್ಕೃತಿಯಾದ ‘ವ್ಯಾಲೆಂಟೈನ್ ಡೇ’ ಆಚರಣೆಗೆ ಉಡುಪಿ ಜಿಲ್ಲಾ ಶ್ರೀರಾಮಸೇನೆಯು ವಿರೋಧ ವ್ಯಕ್ತಪಡಿಸಿದೆ. ನಾವು ಪ್ರೇಮಿಗಳ ವಿರೋದಿಗಳಲ್ಲ. ಆದರೆ ಪ್ರೇಮಿಗಳ ದಿನಾಚರಣೆ ನೆಪದಲ್ಲಿ ಸಾರ್ವಜನಿಕ ಸ್ಥಳ, ಹೋಟೆಲ್, ಪಾರ್ಕ್ ಗಳಲ್ಲಿ ಅಸಭ್ಯ ಹಾಗೂ ಅನೈತಿಕವಾಗಿ ವರ್ತಿಸಿ, ಸಾರ್ವಜನಿಕರಿಗೆ ಮುಜುಗರ ಹಾಗೂ ತೊಂದರೆ ಕೊಡುವುದು ಸರಿಯಲ್ಲ. ಹೆಣ್ಣುಮಕ್ಕಳನ್ನು ನೀಚವಾಗಿ ಕಾಣುವಂತಹ ಈ ದಿನವನ್ನು ಆಚರಿಸದೇ, ಭಾರತಮಾತೆಗಾಗಿ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ನಮ್ಮ ಸಹೋದರರಾದ ವೀರಸೈನಿಕರಿಗಾಗಿ ಫೆ. 14 ರಂದು ಹುತಾತ್ಮ […]