ಧರ್ಮಸ್ಥಳ: ಕಂಬಳ ವೀರ ಶ್ರೀನಿವಾಸ ಗೌಡರಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಂದ ಗೌರವ

ಧರ್ಮಸ್ಥಳ: ಕಂಬಳ ವೀರ ಮೂಡಬಿದಿರೆ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಅವರಿಗೆ ನಾಡಿನಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಸೋಮವಾರ ಶ್ರೀನಿವಾಸ ಗೌಡ ಅವರು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶಿರ್ವಾದ ಪಡೆದರು. ಈ ಸಂಧರ್ಭದಲ್ಲಿ ಹೆಗ್ಗಡೆಯವರು ತುಳುನಾಡಿನ ಕಂಬಳ ಕ್ರೀಡೆಯಲ್ಲಿ ಸಾಧನೆಗೈದು ವಿಶ್ವವಿಖ್ಯಾತಿ ಪಡೆದ ಶ್ರೀನಿವಾಸ ಗೌಡ ಅವರಿಗೆ ಅಭಿನಂದನೆ ಸಲ್ಲಿಸಿ, ಕಂಬಳ ಕೂಟದಲ್ಲಿ ಇನ್ನಷ್ಟು ಸಾಧನೆಗಳು ಹೊರಹೊಮ್ಮಲಿ ಅಂತ ಶುಭ ಹಾರೈಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕಂಬಳ ಕ್ರೀಡೆ ತರಬೇತಿ ಕುರಿತು ಕಂಬಳ […]