ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಹಣತೆಗಳಿಂದಲಂಕೃತ ವಿಶ್ವರೂಪ ದರ್ಶನ

ಉಡುಪಿ: ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಇಂದು ಮುಂಜಾನೆ 5ಗಂಟೆಗೆ ಪಶ್ಚಿಮ ಜಾಗರ ಪೂಜೆ, ಸುಪ್ರಭಾತ, ಕಾಕಡ ಆರತಿ ಮತ್ತು ದೇವರ ಸನ್ನಿಧಿಯಲ್ಲಿ ಸಾವಿರಾರು ಹಣತೆಗಳ ದೀಪಗಳಿಂದ ಅಲಂಕೃತವಾದ ವಿಶ್ವ ರೂಪ ದರ್ಶನ ನೆರವೇರಿತು. ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಶ್ರೀ ರಾಮ ದರ್ಶನ , ಶ್ರೀ ಮಹಾಲಕ್ಷ್ಮೀ, ಶಿವಲಿಂಗ ದರ್ಶನ, ಹರೇ ಶ್ರೀನಿವಾಸ, ರಂಗೋಲಿಯ ಚಿತ್ತಾರ, ಹೂಗಳಿಂದ ರಚಿಸಿದ ರಂಗೋಲಿ, ಹಣತೆಯ ದೀಪದಿಂದ ಓಂ , ಸ್ವಸ್ತಿಕ್, ಶಂಖ ಚಕ್ರ […]

ತೆಂಕುಪೇಟೆ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶಾರದಾ ಪ್ರತಿಷ್ಠೆ

ಉಡುಪಿ: ಇಲ್ಲಿನ ತೆಂಕುಪೇಟೆ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದ ಶಾರದಾ ದೇವಿಯ ಪ್ರತಿಷ್ಠೆ ಕಾರ್ಯಕ್ರಮವು ಭಾನುವಾರದಂದು ನಡೆಯಿತು. ದೇವಳದ ಅರ್ಚಕರುಗಳಾದ ದಯಾಘನ್ ಭಟ್, ವಿನಾಯಕ ಭಟ್ ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿ ಶಾರದಾ ದೇವಿಗೆ ಮಹಾ ಮಂಗಳಾರತಿ ಬೆಳಗಿಸಿದರು. ಈ ಹಿನ್ನೆಲೆಯಲ್ಲಿ ಉಡುಪಿ ನಗರವನ್ನು ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ದೇವಳದ ಆಡಳಿತ ಮೊಕ್ತೇಸರ ಪಿ.ವಿ.ಶೆಣೈ, ವಸಂತ್ ಕಿಣಿ, ವಿಶ್ವನಾಥ್ ಭಟ್, ರೋಹಿತಾಕ್ಷ ಪಡಿಯಾರ್ , ಗಣೇಶ್ ಕಿಣಿ, ಅಶೋಕ ಬಾಳಿಗಾ , ನರಹರಿ ಪೈ, […]