ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ದೇವೇಗೌಡ ದಂಪತಿ 

ಉಡುಪಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಂಗಳವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದರು. ಪತ್ನಿ ಚೆನ್ನಮ್ಮ ಅವರೊಂದಿಗೆ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣ ದೇವರ ದರ್ಶನ ಪಡೆದ ದೇವೇಗೌಡರು, ಮಠದ ಸುವರ್ಣ ಗೋಪುರ ಯೋಜನೆ ಬಗ್ಗೆ ತಿಳಿದುಕೊಂಡರು. ಬಳಿಕ ಪರ್ಯಾಯ ಪಲಿಮಾರು ಶ್ರೀವಿದ್ಯಾ ಧೀಶ ತೀರ್ಥ ಸ್ವಾಮೀಜಿ ಅವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದು ಶ್ರೀಕೃಷ್ಣ ಪ್ರಸಾದ ಸ್ವೀಕರಿಸಿದರು. ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಮುಖಂಡರಾದ ಶಾಲಿನಿ […]

ದೇವೇಗೌಡರಿಂದ ಪೇಜಾವರ ಶ್ರೀ ಗಳ ಭೇಟಿ

ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀ ಪಾದರ ಜನ್ಮನಕ್ಷತ್ರ ಅಂಗವಾಗಿ ಮಾಜಿ‌ ಪ್ರಧಾನಿ ಎಚ್.ಡಿ. ದೇವೆಗೌಡ ದಂಪತಿಗಳು ಮಂಗಳವಾರ ಉಡುಪಿಯ ಗೋವಿಂದ ಕಲ್ಯಾಣ ಮಂಟಪದಲ್ಲಿ ಶ್ರೀ ಗಳನ್ನು ಭೇಟಿಯಾಗಿ ಶುಭಹಾರೈಸಿ ಶ್ರೀಗಳಿಂದ ಆಶೀರ್ವಾದ ಪಡೆದರು.

ಏ. 27ಕ್ಕೆ ಪೇಜಾವರ ಶ್ರೀಗಳ ಕುರಿತ ‘ಎ ಡೇ ವಿತ್ ದ ಸೈಂಟ್ ದೆನ್ ಆ್ಯಂಡ್ ನೌ’ ಚಿತ್ರಸಂಪುಟ ಲೋಕಾರ್ಪಣೆ 

ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ನಾಲ್ಕನೇ ಮತ್ತು ಐದನೇ ಪರ್ಯಾಯದ ಒಂದು ದಿನದ ಚಟುವಟಿಕೆಗಳ ಕುರಿತಾಗಿ ಉದಯವಾಣಿ ಪತ್ರಿಕೆಯ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರು ವಿಶೇಷವಾಗಿ ನಿರ್ಮಿಸಿದ ವಿಶೇಷ ಚಿತ್ರಗಳ ಆಧಾರಿತ ಚಿತ್ರಸಂಪುಟ `ಎ ಡೇ ವಿತ್ ದ ಸೈಂಟ್ ದೆನ್ ಆ್ಯಂಡ್ ನೌ’ ಅಪರೂಪದ ಕಾಫಿ ಟೇಬಲ್ ಬುಕ್ ಸಿದ್ಧಗೊಂಡಿದ್ದು ಅದು ಏ. 27ರಂದು ಶ್ರೀಕೃಷ್ಣ ಮಠ ರಾಜಾಂಗಣದಲ್ಲಿ ಅನಾವರಣಗೊಳ್ಳಲಿದೆ ಎಂದು ಭೂತರಾಜ ಪ್ರಕಾಶನ ಪ್ರಕಾಶಕರಾದ ಪ್ರವೀಣಾ ಮೋಹನ್ ತಿಳಿಸಿದ್ದಾರೆ. ಚಿತ್ರ […]

ಎ.22: ಪುತ್ತಿಗೆ ಮಠದ ಶಿಷ್ಯಸ್ವೀಕಾರ ಸಮಾರಂಭ   

ಉಡುಪಿ: ಜಗದ್ಗುರು ಶ್ರೀ ಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಮದುಪೇಂದ್ರ ತೀರ್ಥ ಶ್ರೀ ಪಾದರ 750 ವರ್ಷಗಳ ಗುರುಪರಂಪರೆಯಲ್ಲಿ ಮೂವತ್ತನೇ ಯತಿಗಳಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ಬಾಲಸನ್ಯಾಸವನ್ನು ಸ್ವೀಕರಿಸಿ ವಿಶ್ವದಾದ್ಯಂತ ಧರ್ಮಪ್ರಸಾರ ಮಾಡುವ ಮೂಲಕ ಏ. 22ರಂದು 45 ಸಂವತ್ಸರಗಳನ್ನು ಪೂರೈಸಲಿದ್ದಾರೆ. ಈ ಶುಭ ಸಂದರ್ಭದಲ್ಲಿ ಶ್ರೀಗಳು ಶ್ರೀ ಪ್ರಶಾಂತ ಆಚಾರ್ಯ ಎಂಬ ವಟುವನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಸ್ವೀಕರಿಸಲು ಸಂಕಲ್ಪಿಸಿದ್ದು, ಈ ಸಂಬಂಧ ಹಿರಿಯಡ್ಕ […]

ಶಿರೂರು ಮಠಕ್ಕೆ ಯೋಗ್ಯ ಶಿಷ್ಯ ಸಿಗಲಿದ್ದಾನೆ : ವಿಶ್ವವಲ್ಲಭ ಸ್ವಾಮೀಜಿ

ಉಡುಪಿ:ಶಿರೂರು ಮಠಕ್ಕೆ ಯೋಗ್ಯ ಶಿಷ್ಯನನ್ನು ನೋಡಿ ಇಟ್ಟಿದ್ದೇವೆ. ಆತನಿಗೆ ಸಂನ್ಯಾಸ ಸ್ವೀಕರಿಸುವ ಎಲ್ಲ ಅರ್ಹತೆಗಳಿವೆ. ಆದರೂ ಈಗಲೇ ಎಲ್ಲವನ್ನೂ ತೀರ್ಮಾನಿಸಲು ಆಗಲ್ಲ. ಈಗಲೇ ಆತನ ಹೆಸರನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ ಹೇಳಿದರು. ಉಡುಪಿ ಶಿರೂರು ಮಠದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ  ಅವರು ಮಾತನಾಡಿದರು. ಶಿಷ್ಯನಾಗಲು ಅರ್ಹತೆಯುಳ್ಳವನು ಈಗಾಗಲೇ ಸೋದೆ ಮಠದ ಗುರುಕುಲದಲ್ಲಿ ಅಧ್ಯಯನ ಮಾಡುತ್ತಿದ್ದು, ಮೂರು ವರ್ಷ ಕಾಲ ಆತನ ಚಟುವಟಿಕೆಗಳನ್ನು ಗಮನಿಸುತ್ತೇವೆ.  ಸಂನ್ಯಾಸ ಸ್ವೀಕರಿಸಲು ಯೋಗ್ಯರೆಂದು ಮನಗಂಡ ಮೇಲೆ ಉತ್ತರಾಧಿಕಾರಿಯನ್ನಾಗಿ […]