ದೊಡ್ಡಣ್ಣಗುಡ್ಡೆ: ಏ. 6 ರಂದು ದುರ್ಗಾ ಆದಿಶಕ್ತಿ ಕ್ಷೇತ್ರ ಸತ್ಯನಾರಾಯಣ ವ್ರತ ಕಲ್ಪೋಕ್ತ ಪೂಜೆ ಉದ್ಯಾಪನಾ ಮಹೋತ್ಸವ
ಉಡುಪಿ: ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶ್ರೀ ಲಕ್ಷ್ಮಿ ಸಹಿತ ಸತ್ಯನಾರಾಯಣ ವ್ರತ ಕಲ್ಪೋಕ್ತ ಪೂಜೆಯ ಉದ್ಯಾಪನಾ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಏ. 6 ಗುರುವಾರದಂದು ಹುಣ್ಣಿಮೆಯ ಪರ್ವಕಾಲದಲ್ಲಿ ಮಹಾ ಅನ್ನಸಂತರ್ಪಣೆಯೊಂದಿಗೆ ಸಂಪನ್ನಗೊಳ್ಳಲಿರುವುದು. ಆ ಪ್ರಯುಕ್ತ ಕ್ಷೇತ್ರದಲ್ಲಿ ಏ. 5 ರಂದು ಗಂಟೆ 5 ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಋತ್ವಿಜರ ಸ್ವಾಗತ, ಸಾಮೂಹಿಕ ದೇವತಾ ಪ್ರಾರ್ಥನೆ, ತೋರಣ […]
ದೊಡ್ಡಣ್ಣಗುಡ್ಡೆ ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಕೋಟಿ ಗೀತಾಲೇಖನ ಯಜ್ಞ ಅಭಿಯಾನಕ್ಕೆ ಚಾಲನೆ
ಉಡುಪಿ: ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಭಾವಿ ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಗಳ ಜಾಗತಿಕ ಮಟ್ಟದ ಆಧ್ಯಾತ್ಮಿಕ ಆಂದೋಲನ ಕೋಟಿ ಗೀತಾಲೇಖನ ಯಜ್ಞ ಸ೦ಕಲ್ಪ ಅಭಿಯಾನವು ಕ್ಷೇತ್ರದ ಧರ್ಮದರ್ಶಿ ಶ್ರೀರಮಾನಂದ ಗುರೂಜಿ ಲೇಖನ ದೀಕ್ಷ ಬದ್ಧರಾಗುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಶ್ರೀ ಚಕ್ರಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ ನೆರವೇರಿದ ಸರಳ ಸಮಾರಂಭದಲ್ಲಿ ಮಾತನಾಡಿದ ಶ್ರೀ ಗುರೂಜಿಯವರು, ಶ್ರೀಕೃಷ್ಣ ಪರಮಾತ್ಮನ ಮುಖಕಮಲದಿಂದ ಹೊರಹೊಮ್ಮಿದ ಭಗವಾನ್ ಶ್ರೀ ವೇದವ್ಯಾಸರಿಂದ ರಚಿಸಲ್ಪಟ್ಟ ಶ್ರೀಮದ್ಭಗವದ್ಗೀತೆಯನ್ನು […]