ಉದ್ಯಾವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ: ವಿವಿಧ ಹೋಮ, ಗಣಯಾಗ ಸಂಪನ್ನ
ಉಡುಪಿ: ಉದ್ಯಾವರ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ನವೀಕೃತ ತಾಮ್ರದ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ ಹಾಗು ರಾಶಿಪೂಜಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇಂದು ದೇಗುಲದ ಆವರಣದಲ್ಲಿ ನಡೆಯಿತು. ದೇವಸ್ಥಾನದ ಪುರೋಹಿತರ ನೇತೃತ್ವದಲ್ಲಿ ಅಷ್ಟ ಬಂಧ, ಶಕ್ತಿ ಹೋಮ, ನವಕಪ್ರಧಾನ, ಅಥರ್ವಶೀರ್ಷ ಗಣಯಾಗ ಮತ್ತು ಮಹಾ ಸುದರ್ಶನ ಹೋಮ, ಬಲಿಪೀಠ ಪ್ರತಿಷ್ಠೆ ಹಾಗೂ ಶಾಂತಿ ಪ್ರಾಯಶ್ಚಿತ ಹೋಮಗಳು ಸಂಪನ್ನಗೊಂಡವು.