ಮಾ.12ರಿಂದ ತೆಂಕಪೇಟೆಯ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ ಸುತ್ತುಪೌಳಿ ಜೀರ್ಣೋದ್ಧಾರ, ಪುನಃ ಪ್ರತಿಷ್ಠೆ ಮಹೋತ್ಸವ
ಉಡುಪಿ: ತೆಂಕಪೇಟೆಯ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದ ಸುತ್ತು ಪೌಳಿ ಜೀರ್ಣೋದ್ಧಾರ ಮತ್ತು ಪರಿವಾರ ದೇವರುಗಳ ಪುನಃ ಪ್ರತಿಷ್ಠಾ ಮಹೋತ್ಸವ ಮಾರ್ಚ್ 12ರಿಂದ 15ರ ವರೆಗೆ ನಡೆಯಲಿದೆ ಎಂದು ದೇಗುಲದ ಆಡಳಿತ ಮೊಕ್ತೇಸರ, ಸುತ್ತು ಪೌಳಿ ಜೀರ್ಣೋದ್ಧಾರ ಸಮಿತ ಕಾರ್ಯಾಧ್ಯಕ್ಷ ಪಿ. ವಿಠಲದಾಸ ಶೆಣೈ ತಿಳಿಸಿದರು. ಭಾನುವಾರ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 12ರಂದು ಬೆಳಿಗ್ಗೆ 8 ಗಂಟೆಗೆ ಪ್ರಾರ್ಥನೆ, ಗುರುಗಣಪತಿ ಪೂಜನಾ, ಆದ್ಯ ಗಣಯಾಗ, ಕೂಪಶುದ್ಧಿ, ಮೃತ್ತಿಕಾ ಹರಣ, ಮಹಾಪೂಜೆ, ಬ್ರಾಹ್ಮಣ ಸಂತರ್ಪಣೆ ನೆರವೇರಲಿದ್ದು, […]