ಜು.18 ರಿಂದ ಆ. 17ರ ತನಕ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಅಹೋರಾತ್ರಿ ಭಜನಾ ಮಹೋತ್ಸವ
ತೆಂಕಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರಾವಣ ಪುರುಷೋತ್ತಮ ಅಧಿಕ ಮಾಸ ಅಹೋರಾತ್ರಿ ಭಜನಾ ಮಹೋತ್ಸವವು ಜು.18 ರಿಂದ ಆ. 17ರ ತನಕ ನಿರಂತರ ನಡೆಯಲಿದೆ. ಊರ-ಪರವೂರ ಭಜನಾ ಮಂಡಳಿಗಳುಒಂದು ತಿಂಗಳ ಕಾಲ ಅಹೋರಾತ್ರಿ ಭಜನೆ ಸೇವೆ ನೀಡಲಿದೆ. ಅಲ್ಲದೆ, ಪ್ರತೀ ಆದಿತ್ಯವಾರ ಸಂಜೆ ನಗರ ಭಜನೆ ಹಮ್ಮಿಕೊಳ್ಳಲಾಗಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.
ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಆಚರಣೆ
ಉಡುಪಿ: ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಪ್ರಯುಕ್ತ ಶ್ರೀದೇವರಿಗೆ ವಿಶೇಷ ಅಲಂಕಾರ, ಭಜನಾ ಕಾರ್ಯಕ್ರಮ, ತೊಟ್ಟಿಲು ಸೇವೆ, ವಸಂತ ಪೂಜೆ, ಅಷ್ಟಾವಧಾನ ಸೇವೆ, ಪಲ್ಲಕಿ ಉತ್ಸವ, ರಾತ್ರಿ ಪೇಟೆ ಉತ್ಸವ ನಡೆಯಿತು. ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕ ವಿನಾಯಕ ಭಟ್ ನೆರವೇರಿಸಿದರು. ದೇವಳದ ಆಡಳಿತ ಮೊಕ್ತೇಸರರಾದ ಪಿ ವಿ ಶೆಣೈ, ಜಿ ಎಸ್ ಬಿ, ಯುವಕ ಮಂಡಳಿ, ಮಹಿಳಾ ಮಂಡಳಿಯ ಸದಸ್ಯರು, ಸಮಾಜ ಭಾಂದವರು ಉಪಸ್ಥಿತರಿದ್ದರು.
ತೆಂಕಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಚಂಡಿಕಾ ಹವನ; ಮಕ್ಕಳಿಗೆ ಅಕ್ಷರಾಭ್ಯಾಸ
ಉಡುಪಿ: ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಿಜಯದಶಮಿ ಪ್ರಯುಕ್ತ ಶ್ರೀ ದೇವರ ಸನ್ನಿಧಿಯಲ್ಲಿ ಚಂಡಿಕಾ ಹವನವನ್ನು ವಿನಾಯಕ ಭಟ್ ಮಾರ್ಗದರ್ಶನದಲ್ಲಿ ನಡೆಸಲಾಯಿತು. ದಯಘನ್ ಭಟ್, ಮೇಘಶ್ಯಾಮ್ ಭಟ್, ದೀಪಕ್ ಭಟ್ ಮತ್ತು ಅರ್ಚಕ ವೃಂದದವರು ಸಾಮೂಹಿಕ ಪ್ರಾರ್ಥನೆ, ಧಾರ್ಮಿಕ ಪೂಜಾ ವಿಧಾನಗಳನ್ನು ನಡೆಸಿಕೊಟ್ಟರು. ಚಂಡಿಕಾ ಹವನ ಪೂಜಾ ಕಾರ್ಯದಲ್ಲಿ ಹೆಚ್ ಉಮೇಶ್ ದಂಪತಿಗಳು ಸಹಕರಿಸಿದರು. ಪೂರ್ಣಾಹುತಿ ಮಹಾಪೂಜೆ ಬಳಿಕ ಸಮಾರಾಧನೆ ನಡೆಯಿತು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ವಿನಾಯಕ ಭಟ್ ನಡೆಸಿಕೊಟ್ಟರು. ದೇವಳದ ಆಡಳಿತ […]
ಗೋಕರ್ಣ ಪರ್ತಗಾಳಿ ಮಠಾಧೀಶರಿಂದ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ ಭೇಟಿ
ಉಡುಪಿ: ಭಾನುವಾರದಂದು ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಇಲ್ಲಿನ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನಕ್ಕೆ ಭೇಟಿ ನೀಡಿದರು. ಗೋಕರ್ಣ ಪರ್ತಗಾಳಿ ಜೀವವೋತ್ತಮ ಮಠಾಧಿಪತಿಯಾಗಿ ಪ್ರಥಮ ಬಾರಿಗೆ ಭೇಟಿ ನೀಡಿದ ಶ್ರೀಪಾದರನ್ನು ತೆಂಕಪೇಟೆಯ ಐಡಿಯಲ್ ಸರ್ಕಲ್ ನಿಂದ ಮೆರವಣಿಗೆಯಲ್ಲಿ ಪೂರ್ಣ ಕುಂಭ ಸ್ವಾಗತ, ಚಂಡೆ, ಮಂಗಳವಾದ್ಯದ ಮೂಲಕ ಸ್ವಾಗತಿಸಿ ದೇವಾಲಯಕ್ಕೆ ಕರೆತರಲಾಯಿತು. ದೇವರ ಭೇಟಿಯ ಬಳಿಕ ವೇದಿಕೆಯಲ್ಲಿನ ಶ್ರೀಮದ್ ಭಾಗವತ ಗೃಂಥಕ್ಕೆ ಆರತಿ ಬೆಳಗಿಸಿದರು. ಪ್ರವಚನಕಾರದ ವಿದ್ವಾನ್ ಅನಂತಕೃಷ್ಣ ಆಚಾರ್ಯರನ್ನು ಶಾಲು ಹೊದಿಸಿ ಗೌರವಿಸಿದರು. ದೇವಳದ […]
ಶ್ರೀಲಕ್ಷ್ಮೀವೆಂಕಟೇಶ ದೇವಳದಲ್ಲಿ ರಂಗಪೂಜೆಯ ಸೊಬಗು: ಪುಷ್ಪಾಲಂಕಾರದಲ್ಲೂ ಮೂಡಿಬಂತು ತ್ರಿವರ್ಣ ಧ್ವಜ!
ಉಡುಪಿ: ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಅಂಗವಾಗಿ ಭಾನುವಾರದಂದು ರಂಗಪೂಜೆಯ ಪ್ರಯುಕ್ತ ವಿಶೇಷ ಹೂವಿನ ಅಲಂಕಾರ ನಡೆಯಿತು. ಹೂವಿನ ಅಲಂಕಾರದಲ್ಲಿಯೂ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿ ತೋರಿಸಿದ್ದು ವಿಶೇಷವಾಗಿತ್ತು.