ಅ.15ರಿಂದ 24: ಶ್ರೀ ಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ
ಕುಂದಾಪುರ: ಶ್ರೀ ಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅ. 15ರಿಂದ ಅ. 24 ರವರೆಗೆ ದೇವಿ ಸನ್ನಿಧಿಯಲ್ಲಿ ನವರಾತ್ರಿ ವಿಶೇಷ ಪೂಜಾ ಸಮಾರಂಭ ನಡೆಯಲಿದ್ದು, ಅ. 20 ರಂದು ಮೂಲ ನಕ್ಷತ್ರ ದಿನದಂದು ಚಂಡಿಕಾಯಾಗ ಜರುಗಲಿರುವುದು. ನವರಾತ್ರಿಯ ಈ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಆಗಮಿಸಿ, ತನು ಮನ ಧನ ಧಾನ್ಯದಿ ಅರ್ಪಣೆಯೊಂದಿಗೆ ಸಹಕರಿಸಿ, ಶ್ರೀ ದೇವಿಯ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಅಮ್ಮನವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ದೇವಳದ ಪ್ರಕಟಣೆ ತಿಳಿಸಿದೆ.