ಬೊರಿವಲಿ: ಶ್ರೀ ಕ್ಷೇತ್ರ ಮಹಿಷಮರ್ದಿನಿ ದೇವಸ್ಥಾನ 33ನೇ ಪೂಜಾ ಮಹೋತ್ಸವ ದೈವಾರಾಧನೆ ನೇಮೋತ್ಸವ
ಬೊರಿವಲಿ: ಶ್ರೀ ಕ್ಷೇತ್ರ ಮಹಿಷಮರ್ದಿನಿ ದೇವಸ್ಥಾನದ 33ನೇ ಪೂಜಾ ಮಹೋತ್ಸವ ದೈವಾರಾಧನೆ ನೇಮೋತ್ಸವ ಜೂ. 4ರಂದು ಜರುಗಿತು. ಧಾರ್ಮಿಕ ತಳಹದಿ ಭದ್ರಗೊಂಡಾಗ ದೇವಾಲಯಗಳ ಸಾನಿಧ್ಯ ಚೈತನ್ಯ ವೃದ್ಧಿಗೊಳ್ಳುವುದು. ಜೊತೆಗೆ ಊರು ಪರಿಸರ ಸುಭಿಕ್ಷೆಗೊಳ್ಳುವುದು. 12 ವರ್ಷಕ್ಕೊಮ್ಮೆ ಬ್ರಹ್ಮಕಲಶ ನೆರವೇರಿಸುವ ಸಂಕಲ್ಪದೊಂದಿಗೆ ಸಮಸ್ತ ತುಳು ಕನ್ನಡಿಗರ ಶ್ರೇಯೋಭಿವೃದ್ಧಿ, ಕಳೆದ ಕಾಲಾವಧಿಯಲ್ಲಿ ಜಗತ್ತನ್ನೇ ತಲ್ಲಣ ಗೊಳಿಸಿದ ಸಾಂಕ್ರಾಮಿಕದಂತಹ ರೋಗಗಳಿಂದ ದೂರವಾಗಿರಿಸುವ ಉದ್ದೇಶದಿಂದ ಪ್ರಸಕ್ತ ವರ್ಷ ದೇವಸ್ಥಾನದ ಸರ್ವಭಕ್ತರ ಆಶಯದೊಂದಿಗೆ ಊರಿನ ಕೋಲದ ತಂಡದೊಂದಿಗೆ ನೇಮೋತ್ಸವ ಜರಗಿದೆ. ದೈವಾರಾಧನೆ ಹಿರಿಯರ ಕಟ್ಟುಕಟ್ಟಲೆಗಳು […]