ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ ರಾಜ್ಯಪಾಲರ ಥಾವರ್ ಚಂದ್ ಗೆಹಲೋಟ್
ಉಡುಪಿ: ಶ್ರೀಕೃಷ್ಣಮಠಕ್ಕೆ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ರವರು ಭೇಟಿ ನೀಡಿದ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ದೇವರ ದರ್ಶನ ಪಡೆದ ರಾಜ್ಯಪಾಲರು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಗೆ ಹಾರ ಹಾಕಿ, ಫಲವಸ್ತುಗಳನ್ನು ನೀಡಿ ಗೌರವ ಸಲ್ಲಿಸಿದರು. ಪರ್ಯಾಯ ಶ್ರೀಪಾದರು ರಾಜ್ಯಪಾಲರಿಗೆ ಸ್ಮರಣಿಕೆ ಹಾಗೂ ಶ್ರೀಕೃಷ್ಣನ ಪ್ರಸಾದ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕೇರಂದ್ಲಾಜೆ ಹಾಗೂ ರಾಜ್ಯ ಸಚಿವರುಗಳಾದ ಸುನಿಲ್ ಕುಮಾರ್ , […]
ಬೇಟೆಗೆ ಹೊರಟ ಶ್ರೀನಿವಾಸ….. ಶ್ರೀಕೃಷ್ಣ ಮಠದಲ್ಲಿ ಕೃಷ್ಣನಿಗೆ ವಿಶೇಷಾಲಂಕಾರ….
ಉಡುಪಿ: ಶ್ರಾವಣ ಶನಿವಾರದ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣದೇವರಿಗೆ ಕಾಣಿಯೂರು ಮಠಾಧೀಶರು “ಬೇಟೆಗೆ ಹೊರಟ ಶ್ರೀನಿವಾಸ” ಅಲಂಕಾರ ಮಾಡಿದರು. ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.
ಕಣ್ಮನ ಸೆಳೆಯುವ ಹೃದಯವ ತಣಿಸುವ ಪುಷ್ಪಾಲಂಕಾರ: ಶ್ರೀ ಕೃಷ್ಣ ಮಠಕ್ಕೆ ಭಕ್ತರೊಬ್ಬರ ಸೇವೆ
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಭಕ್ತರೊಬ್ಬರಿಂದ ನೀಡಲಾದ ಪುಷ್ಪಾಲಂಕಾರ ಸೇವೆಯು ಕಣ್ಮನ ಸೆಳೆಯುತ್ತಿದೆ.