ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 21ನೇ ಮಹಾಸಭೆಯ ಪ್ರಯುಕ್ತ ಭಕ್ತಿ ಸಿಂಚನ ಕಾರ್ಯಕ್ರಮ

ಉಡುಪಿ: ಪರ್ಕಳದ ಶ್ರೀ ದುರ್ಗಾ ಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 21 ನೇ ಮಹಾಸಭೆಯ ಪ್ರಯುಕ್ತ ಭಕ್ತಿ ಸಿಂಚನ ಕಾರ್ಯಕ್ರಮವು ಮಣಿಪಾಲದ ನರಸಿಂಗೆಯ ನರಸಿಂಹ ಸಭಾಭವನದಲ್ಲಿ ಅಗಸ್ಟ್ 21 ರಂದು ಅಪರಾಹ್ನ 2 ಘಂಟೆಯಿಂದ ನಡೆಯಲಿದೆ. ಕಲರ್ಸ್ ಕನ್ನಡದ ‘ಕನ್ನಡ ಕೋಗಿಲೆ’ ಖ್ಯಾತಿಯ ಗುಲ್ಬರ್ಗಾದ ಅನಂತರಾಜ್ ಮಿಸ್ತ್ರೀ, ಹಾಗೂ ಶ್ರೀಮತಿ ದಿವ್ಯಾ ಗಿರಿಧರ್ ಬಳಗದವರಿಂದ ಭಕ್ತಿ ಸಿಂಚನ ಕಾರ್ಯಕ್ರಮ ನಡೆಯಲಿದೆ ಎಂದು ಕಛೇರಿ ಪ್ರಕಟಣೆ ತಿಳಿಸಿದೆ.