ಶ್ರೀ ಧೂಮಾವತಿ ದೈವಸ್ಥಾನ ಬೈಲೂರು: ದೈವಸ್ಥಾನಗಳ ಜೀರ್ಣೋದ್ಧಾರದಿಂದ ನಾಡು ಅಭಿವೃದ್ಧಿ: ಶಾಸಕ ರಘುಪತಿ ಭಟ್
ಉಡುಪಿ: ತುಳುನಾಡು ವಿಶ್ವದಾದ್ಯಂತ ಹೆಸರು ಪಡೆದಿದೆ. ಪ್ರಸ್ತುತ ನಶಿಸಿ ಹೋದ ದೈವಸ್ಥಾನ, ದೇವಸ್ಥಾನಗಳನ್ನು ಹುಡುಕಿ, ಜೀರ್ಣೋದ್ಧಾರ ಮಾಡುವ ಮೂಲಕ ನಮ್ಮ ನಾಡು ಅಭಿವೃದ್ದಿಯತ್ತ ಸಾಗುತ್ತಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.ಬೈಲೂರು ಶ್ರೀಮಹಿಷಮರ್ದಿನಿ ದೇವಸ್ಥಾನದ ಶ್ರೀ ಧೂಮಾವತಿ ದೈವಸ್ಥಾನ ಜೀರ್ಣೋದ್ಧಾರದ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇರಳದ ಜ್ಯೋತಿಷ ವಾಚಸ್ಪತಿ ದೈವಜ್ಞ ಎ.ವಿ. ಮಾಧವನ್ ಪೊದುವಾಳ್ ಉದ್ಘಾಟಿಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ದಾನಿಗಳನ್ನು ಸನ್ಮಾನಿಸಲಾಯಿತು. ತಂತ್ರಿಗಳಾದ […]