ಶ್ರೀ ಧೂಮಾವತಿ ದೈವಸ್ಥಾನ ಬೈಲೂರು: ದೈವಸ್ಥಾನಗಳ ಜೀರ್ಣೋದ್ಧಾರದಿಂದ ನಾಡು ಅಭಿವೃದ್ಧಿ: ಶಾಸಕ ರಘುಪತಿ ಭಟ್

ಉಡುಪಿ: ತುಳುನಾಡು ವಿಶ್ವದಾದ್ಯಂತ ಹೆಸರು ಪಡೆದಿದೆ. ಪ್ರಸ್ತುತ ನಶಿಸಿ ಹೋದ ದೈವಸ್ಥಾನ, ದೇವಸ್ಥಾನಗಳನ್ನು ಹುಡುಕಿ, ಜೀರ್ಣೋದ್ಧಾರ ಮಾಡುವ ಮೂಲಕ ನಮ್ಮ ನಾಡು ಅಭಿವೃದ್ದಿಯತ್ತ ಸಾಗುತ್ತಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.ಬೈಲೂರು ಶ್ರೀಮಹಿಷಮರ್ದಿನಿ ದೇವಸ್ಥಾನದ ಶ್ರೀ ಧೂಮಾವತಿ ದೈವಸ್ಥಾನ ಜೀರ್ಣೋದ್ಧಾರದ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇರಳದ ಜ್ಯೋತಿಷ ವಾಚಸ್ಪತಿ ದೈವಜ್ಞ ಎ.ವಿ. ಮಾಧವನ್ ಪೊದುವಾಳ್ ಉದ್ಘಾಟಿಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ದಾನಿಗಳನ್ನು ಸನ್ಮಾನಿಸಲಾಯಿತು.

ತಂತ್ರಿಗಳಾದ ವೇ|ಮೂ|ವಿದ್ವಾನ್ ಕೆ.ಎ. ರಮಣ ತಂತ್ರಿ ಕೊರಂಗ್ರಪಾಡಿ ವೇ|ಮೂ|ವಿದ್ವಾನ್ ಕೆ. ಎಸ್. ಕೃಷ್ಣಮೂರ್ತಿ ತಂತ್ರಿ ಕೊರಂಗ್ರಪಾಡಿ, ಉದ್ಯಮಿ ಭರತ್ ಎಂ. ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಗರಸಭಾ ಸದಸ್ಯ ಶ್ರೀ ಕೃಷ್ಣರಾವ್ ಕೊಡಂಚ, ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ್ ಮುದ್ದಣ ಶೆಟ್ಟಿ, ದೈವಸ್ಥಾನ ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷ ನವೀನ್ ಭಂಡಾರಿ, ಉಪಾಧ್ಯಕ್ಷ ಸದಾನಂದ ಶೆಟ್ಟಿ, ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿಗಾರ್, ಜೀರ್ಣೋದ್ಧಾರ ಸಮಿತಿ, ಆಡಳಿತ ಸಮಿತಿಯ ಕೋಶಾಧಿಕಾರಿ ಸುದರ್ಶನ ಶೇರಿಗಾರ್, ದೈವಸ್ಥಾನದ ಸ್ಥಳದಾನಿ ಸದಾನಂದ ಶೆಟ್ಟಿ ಬೈಲೂರು ಮೂಡುಮನೆ, ಗುರಿಕಾರ ಪಡುಮನೆ ಮೂಡುಮನೆ ದಿನೇಶ ಶೆಟ್ಟಿ ಬೈಲೂರು, ಕಂಬಳ ಮನೆ ರಾಜೇಶ ಶೆಟ್ಟಿ, ಸಂಜಯ ಶೆಟ್ಟಿ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಬೈಲೂರು ವಂದಿಸಿದರು. ನಮ್ರತಾ ರಾಕೇಶ್ ಶೆಟ್ಟಿ, ಸತೀಶ ಹೊಸಮಾರು ಕಾರ್ಯಕ್ರಮ ನಿರೂಪಿಸಿದರು.