ಸಿರಿ ಧಾನ್ಯಗಳ ಆಹಾರ ಮತ್ತು ಸಿರಿ ಸ್ವದೇಶಿ ಉತ್ಪನ್ನಗಳ ಪ್ರದರ್ಶನ- ಮಾರಾಟ ಮೇಳ ಉದ್ಘಾಟನೆ

ಕುಂದಾಪುರ: ದೇಶದ ರೈತರು ಇಂದು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ. ಸಿರಿ ಧಾನ್ಯಗಳು ಯಾವತ್ತೋ ನಮ್ಮ ತಟ್ಟೆಯಿಂದ ಮಾಯವಾಗಿವೆ. ನಾವೆಲ್ಲರೂ ಫಾಸ್ಟ್‍ಫುಡ್‍ಗಳಿಗೆ ದಾಸರಾಗುತ್ತಿದ್ದೇವೆ. ನಮ್ಮ ಜೀವನಕ್ರಮದಿಂದಾಗಿ ಬಹಳಷ್ಟು ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದಕ್ಕೆ ಉತ್ತರವಾಗಿ ಸಿರಿ ಧಾನ್ಯಗಳು ಮತ್ತೆ ಜನಪ್ರಿಯವಾಗುತ್ತಿವೆ ಎಂದು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ನಿರ್ದೇಶಕಿ ಮನೋರಮಾ ಭಟ್ ಹೇಳಿದರು. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಬೆಳ್ತಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ […]