ಶ್ರೀ ಭಂಡಾರಕೇರಿ ಮಠ: ಇಬ್ಬರು ಪೂರ್ವಯತಿಗಳ ವೃಂದಾವನ ಶೋಧ, ಪುನಃಪ್ರತಿಷ್ಠೆ
ಉಡುಪಿ: ಜಗದ್ಗುರು ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮಠಗಳಲ್ಲಿ ಒಂದಾಗಿರುವ ಶ್ರೀ ಭಂಡಾರಕೇರಿ ಮಠದ ಶ್ರೀ ಸತ್ಯತೀರ್ಥ ಯತಿಪರಂಪರೆಯ ಇಬ್ಬರು ಪೂರ್ವಯತಿಗಳ ಮೂಲ ವೃಂದಾವನವು ಶೋಧಿಸಲ್ಪಟ್ಟಿದ್ದು, ಅವುಗಳ ಪುನರ್ ನಿರ್ಮಾಣ ಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವವು ಶ್ರೀಮಠದ ಈಗಣ ಯತಿಗಳಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರ ನೇತೃತ್ವ, ಜೋತಿರ್ವಿದ್ವಾನ್ ಇರ್ವತ್ತೂರು ಗೋಪಾಲ ಜೋಯಿಸರ ಮಾರ್ಗದರ್ಶನ, ವಿದ್ವಾನ್ ಕೃಷ್ಣ ಕುಮಾರ ಆಚಾರ್ಯರ ಅಧ್ವರ್ಯುತನದಲ್ಲಿ ಸೋಮವಾರ ನೆರವೇರಿತು. ಶ್ರೀ ಮಠದಲ್ಲಿ ಇತ್ತೀಚೆಗೆ ನಡೆದ ಆರೂಢ ಪ್ರಶ್ನೆಯ ಸಂದರ್ಭದಲ್ಲಿ ಪೂರ್ವಯತಿದ್ವರ ವೃಂದಾವನ ಭೂಗತವಾಗಿರುವುದು ಅರಿವಿಗೆ ಬಂದಿತ್ತು. […]