ಉಡುಪಿ ಮಹತೋಭಾರ ಶ್ರೀ ಅನಂತೇಶ್ವರ ದೇವಸ್ಥಾನಕ್ಕೆ ಪುತ್ತಿಗೆ ಶ್ರೀಗಳಿಂದ ರಜತಕವಚ ಸಮರ್ಪಣೆ

ಉಡುಪಿ: ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಷಷ್ಟ್ಯಬ್ದಪೂರ್ತಿ ಪ್ರಯುಕ್ತ ಉಡುಪಿಯ ಮಹತೋಭಾರ ಶ್ರೀ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನಕ್ಕೆ ಗುರುವಾರ ₹15 ಲಕ್ಷ ರೂ. ವೆಚ್ಚದಲ್ಲಿ ರಜತಕವಚ ಸಮರ್ಪಣೆ ಮಾಡಲಾಯಿತು. ಅನಂತೇಶ್ವರ ದೇವರ ಮಹಾರಥೋತ್ಸವದ ನಿಮಿತ್ತ ಜೋಡು ದೇಗುಲದ ಆಡಳಿತ  ಮುಕ್ತೇಸರರೂ ಆಗಿರುವ ಪುತ್ತಿಗೆ ಶ್ರೀಗಳು, ವೈಯಕ್ತಿಕ ಸೇವಾರೂಪವಾಗಿ ರಥಬೀದಿಯಲ್ಲಿ ಮೆರವಣಿಗೆಯೊಂದಿಗೆ ಸಾಗಿ ಬಂದು ದೇವರಿಗೆ ರಜತಕವಚ ಸಮರ್ಪಣೆ ಮಾಡಿದರು.