ಕ್ರೀಡೆಗೆ ಎಲ್ಲರನ್ನೂ ಜತೆಗೂಡಿಸುವ ಶಕ್ತಿಯಿದೆ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ

ಉಡುಪಿ: ದಿನನಿತ್ಯದ ಜಂಜಾಟಗಳಿಂದ‌ ಸದಾ ಒತ್ತಡದಲ್ಲಿರುವ ಜನರನ್ನು ಒಂದೆಡೆ ಸೇರಿಸಿ ಯಾವುದೇ ವಯೋಮಿತಿಗೆ ಕಡಿವಾಣ ಹಾಕದೆ ಎಲ್ಲರಿಗೂ ಮುಕ್ತ ಅವಕಾಶ ಕೊಟ್ಟ ಈ ಕ್ರೀಡಾಕೂಟ ಬಹಳ ಅರ್ಥಪೂರ್ಣವಾದುದು. ಕ್ರೀಡೆಗೆ ಎಲ್ಲಾ‌ ಮನಸ್ಸುಗಳನ್ನು ಜೊತೆಯಾಗಿಸುವ ಶಕ್ತಿ ಇದೆ ಎಂದು ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಹೇಳಿದರು. ಅವರು ಸಾಸ್ತಾನ ಸಂತ ಅಂತೋನಿ ದೇವಾಲಯದ ಶತಮಾನೋತ್ಸವ ಪ್ರಯುಕ್ತ ಚರ್ಚ್ ಪಾಲನಾ ದಿವಸದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಆಟದಲ್ಲಿ ಸೋಲು- ಗೆಲುವು ಮುಖ್ಯವಲ್ಲ. ಇಂದು ಗೆದ್ದವರು ನಾಳೆ ಸೋಲಬಹುದು ಅಂತೆಯೇ ಇಂದು ಸೋತವರು ನಾಳೆ ಗೆಲ್ಲಬಹುದು. ಸೋಲು-ಗೆಲುವು […]