“ಆಳುವ ಶಕ್ತಿಗಳು ಮಹಿಳೆಯರ ಮೇಲೆ ಮೌಡ್ಯತೆ ತುಂಬುತ್ತಿದೆ”
ಕುಂದಾಪುರ: ಮಹಿಳೆಯರಲ್ಲಿ ಮೌಡ್ಯತೆ ತುಂಬಿ ಶಬರಿಮಲೆ ಪ್ರವೇಶ ಅಪರಾಧವೆಂಬ ಭಾವನೆ ಮೂಡಿಸಿ ರಾಜಕೀಯ ಲಾಭ ಪಡೆಯಲು ಆಳುವ ಶಕ್ತಿಗಳೇ ಮುಂದಾಗುತ್ತಿರುವುದು ವಿಷಾದನೀಯ ಎಂದು ರಾಜ್ಯ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ವಿ.ಗೀತಾ ತಿಳಿಸಿದ್ದಾರೆ. ಇಲ್ಲಿನ ಹಂಚು ಕಾರ್ಮಿಕರ ಭವನದಲ್ಲಿ ಭಾನುವಾರ ನಡೆದ ತಾಲ್ಲೂಕು ಜನವಾದಿ ಮಹಿಳಾ ಸಂಘಟನೆಯ ಮೊದಲ ಸಮ್ಮೇಳನದಲ್ಲಿ ಅವರು ಮಾತನಾಡಿದರು. ರೈತರ ಸಾಲ ಮನ್ನಾ ವಿಚಾರ ಮಾತನಾಡುತ್ತಿರುವ ರಾಜಕೀಯ ಪಕ್ಷಗಳು, ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಸ್ತ್ರೀ ಶಕ್ತಿ ಸಂಘಗಳ ಮೂಲಕ ಶೇ.೪ ರ […]