ಜಿಟಿ ಜಿಟಿ ಮಳೆಗೆ ಈ ಆರೋಗ್ಯಕರ ಸೂಪ್ ಜೊತೆಗಿದ್ರೆ ಆಹಾ ಏನ್ ಮಜಾ ಅಂತೀರಿ!

  ಮಳೆಗಾಲ ಶುರುವಾಯ್ತು ಅಂದ್ರೆ ಏನಾದರೂ ಬಿಸಿ-ಬಿಸಿ ಮಾಡಿ ತಿನ್ನಬೇಕು ಅಥವಾ ಕುಡಿಯಬೇಕು ಎಂಬ ಬಯಕೆಯಾಗುವುದು ಸಹಜ. ಜೋರಾಗಿ ಮಳೆ ಸುರಿಯುವ ಸಮಯದಲ್ಲಿ ಬಿಸಿ-ಬಿಸಿ ಸೂಪ್ ಮಾಡಿ ಕುಡಿಯುವುದರಲ್ಲಿರುವ ಮಜಾ ಬೇರ್ಯಾವುದರಲ್ಲೂ ಇಲ್ಲ. ಇದರಿಂದ ನಾಲಿಗೆಗೆ ರುಚಿಯೂ ಹೆಚ್ಚುತ್ತದೆ, ಮೈಯ ಚಳಿಯೂ ಬಿಡುತ್ತದೆ. ಆಲಸ್ಯದಿಂದ ಕೂಡಿರುವ ದೇಹಕ್ಕೆ ಉಲ್ಲಾಸ ನೀಡುತ್ತದೆ. ಮಳೆಗಾಲದಲ್ಲಿ ಬಿಸಿ-ಬಿಸಿಯಾದ ಸೂಪ್ ಕುಡಿಯುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಸೂಪ್ ನ ಸೇವನೆಯಿಂದ ಜೀರ್ಣಶಕ್ತಿ ವೃದ್ಧಿಯಾಗುತ್ತದೆ  ಎನ್ನುತ್ತಾರೆ  ಸಿಂಥಿಯಾ ಮೆಲ್ವಿನ್.  ಅವರ  ಈ ವಾರದ  “ನಮ್ಮ ಆರೋಗ್ಯ […]