ಚಂದ್ರಯಾನ-3 ರ ತಂತ್ರಜ್ಞಾನವನ್ನು ಭಾರತ ತಮ್ಮ ಜೊತೆ ಹಂಚಿಕೊಳ್ಳಬೇಕೆಂದು ಯುಎಸ್ ತಜ್ಞರು ಬಯಸಿದ್ದರು: ಎಸ್ ಸೋಮನಾಥ್
ರಾಮೇಶ್ವರಂ: ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಅಭಿವೃದ್ಧಿ ಚಟುವಟಿಕೆಗಳನ್ನು ವೀಕ್ಷಿಸಿದ ನಂತರ ಅಮೆರಿಕದಲ್ಲಿ ಸಂಕೀರ್ಣ ರಾಕೆಟ್ ಮಿಷನ್‌ಗಳನ್ನು ಅಭಿವೃದ್ಧಿಪಡಿಸುವ ತಜ್ಞರು ಭಾರತವು ತನ್ನ ಬಾಹ್ಯಾಕಾಶ ತಂತ್ರಜ್ಞಾನವನ್ನು ಹಂಚಿಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ. ಕಾಲ ಬದಲಾಗಿದೆ ಮತ್ತು ಭಾರತವು ಅತ್ಯುತ್ತಮ ಸಾಧನಗಳು ಮತ್ತು ರಾಕೆಟ್‌ಗಳನ್ನು ನಿರ್ಮಿಸಲು ಸಮರ್ಥವಾಗಿದೆ ಮತ್ತು ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆದಿದ್ದಾರೆ. ನಮ್ಮ ದೇಶ ಅತ್ಯಂತ ಶಕ್ತಿಶಾಲಿ ರಾಷ್ಟ್ರ. ದೇಶದಲ್ಲಿನ ಜ್ಞಾನ ಮತ್ತು ಬುದ್ಧಿವಂತಿಕೆಯ ಮಟ್ಟವು […]