ಶಿಕ್ಷಾಪ್ರಭಾದ ವೈಷ್ಣವಿ, ಅಕ್ಷಯ್ ಗೆ ಸಿಎ ಇಂಟರ್ ಫೌಂಡೇಶನ್ ನಲ್ಲಿ ರ್ಯಾಂಕ್
ಕುಂದಾಪುರ: ಕುಂದಾಪುರ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಅಖಿಲ ಭಾರತೀಯ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಶಿಕ್ಷಾ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ( ಸ್ಪೇಸ್)ನ ವಿದ್ಯಾರ್ಥಿಗಳಾದ ವೈಷ್ಣವಿ ಎಂ. ವಿ. 21ನೇ ರ್ಯಾಂಕ್ ಮತ್ತು ಎನ್. ಅಕ್ಷಯ್ ಕಾಮತ್ 27ನೇ ರ್ಯಾಂಕ್ ಗಳಿಸಿದ್ದಾರೆ. ವೈಷ್ಣವಿ ಅವರು ವಾಸುದೇವ ಪೂಜಾರಿ- ಶಾಂತಾ ವಿ. ಪೂಜಾರಿ ದಂಪತಿಯ ಪುತ್ರಿ ಹಾಗೂ ಅಕ್ಷಯ್ ಅವರು ಗೋಪಾಲಕೃಷ್ಣ ಕಾಮತ್- ಅನ್ನಪೂರ್ಣಾ ದಂಪತಿಯ ಪುತ್ರರಾಗಿದ್ದಾರೆ