ದೇಶದ ಭವಿಷ್ಯದ ಸೈನಿಕರು ರಸ್ತೆ ಬದಿ ರಾತ್ರಿ ಕಳೆದಿರುವುದು ಜಿಲ್ಲಾಡಳಿತಕ್ಕೆ ಕಾಣುವುದಿಲ್ಲವೇ: ಅಶೋಕ್ ಕುಮಾರ್ ಕೊಡವೂರು
ಉಡುಪಿ: ಉಡುಪಿ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ ಎರಡು ದಿನಗಳಿಂದ ಭಾರತೀಯ ಸೇನೆಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ನಮ್ಮ ರಾಜ್ಯದ ಸುಮಾರು ಹನ್ನೊಂದು ಜಿಲ್ಲೆಗಳಿಂದ ಸಾವಿರಾರು ಯುವಕರು ಉಡುಪಿ ನಗರಕ್ಕೆ ಬಂದಿಳಿದಿದ್ದಾರೆ. ಬಂದವರಿಗೆ ಆಯ್ಕೆ ಸಮಿತಿಯು ಯಾವುದೇ ವಸತಿ ಊಟ ಸೌಕರ್ಯಗಳನ್ನು ವ್ಯವಸ್ಥೆ ಮಾಡಿದಂತೆ ಕಾಣುತ್ತಿಲ್ಲ. ಬಡ ಕುಟುಂಬಗಳಿಂದ ಬಂದ ಈ ಹುಡುಗರು ಎಲ್ಲೆಲ್ಲೋ ಉಪಹಾರ ಸೇವಿಸಿಕೊಂಡು ರಸ್ತೆಯ ಇಕ್ಕೆಲಗಳಲ್ಲಿ , ಒಳರಸ್ತೆಗಳ ಡಾಂಬರು ನೆಲದ ಮೇಲೆ ಹಗಲಿರುಳು ಮಲಗುತ್ತಿರುವ ದೃಶ್ಯ ನಿಜಕ್ಕೂ ಮನಕಲಕುವಂತಿದೆ ಎಂದು ಜಿಲ್ಲಾ […]