ಖಂಡಗ್ರಾಸ ಸೂರ್ಯಗ್ರಹಣ: ದೀಪಾವಳಿ ಹಬ್ಬದ ಧಾರ್ಮಿಕ ವಿಧಿವಿಧಾನಗಳ ವಿವರ

ಉಡುಪಿ: ಈ ಬಾರಿ ದೀಪಾವಳಿಯಂದೇ ಖಂಡಗ್ರಾಸ ಸೂರ್ಯಗ್ರಹಣವಿರುವುದರಿಂದ ಅಂಗಡಿ ಪೂಜೆ ಮುಂತಾದವುಗಳನ್ನು ಸೋಮವಾರದಂದು ಸಂಜೆ ಮಾಡಿದಲ್ಲಿ ಪ್ರಶಸ್ತವಾಗಿರುತ್ತದೆ. ದೀಪಾವಳಿ ಹಬ್ಬದ ಧಾರ್ಮಿಕ ವಿಧಿ ವಿಧಾನಗಳು: ಅ.23 ಭಾನುವಾರದಂದು ಸಂಜೆ ಗಂಗಾ ಸ್ಮರಣ ಪೂಜಾ, ಜಲಪೂರಣ. ನೀರು ತುಂಬುವುದು. ಅ. 24 ರಂದು ಸೋಮವಾರ ತೈಲಾಭ್ಯಂಜನ, ನರಕಚತುರ್ದಶಿ. ದೀಪಾವಳಿ, ಧನ -ಧಾನ್ಯ -ಲಕ್ಷ್ಮೀಪೂಜೆ, ಬಲಿಂದ್ರ ಪೂಜೆ. ಅ. 25 ಮಂಗಳವಾರ ಬೆಳಿಗ್ಗೆ ಗೋಪೂಜೆ; ಸಂಜೆ ಖಂಡಗ್ರಾಸ ಸೂರ್ಯಗ್ರಹಣ ಸ್ಪರ್ಶ ಕಾಲ: ಸಾಯಂಕಾಲ ಗಂ.5.06 ನಿಮಿಷ; ಗ್ರಹಣ ಮೋಕ್ಷ: ಸಾಯಂಕಾಲ […]

ಈ ವರ್ಷದ ಕೊನೆಯ ಖಂಡಗ್ರಾಸ ಸೂರ್ಯ ಮತ್ತು ಚಂದ್ರಗ್ರಹಣ ಕಾಲದ ಫಲಾಫಲಗಳು

ಸೂರ್ಯ ಮತ್ತು ಚಂದ್ರಗ್ರಹಣಗಳು ಸರ್ವೇ ಸಾಮಾನ್ಯ ಖಗೋಳ ವಿದ್ಯಮಾನಗಳಾಗಿದ್ದು, ಗ್ರಹಣದ ಬಗ್ಗೆ ಅನವಶ್ಯಕ ಭಯ ಪಡುವ ಅಗತ್ಯವಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಸೂರ್ಯ ಮತ್ತು ಚಂದ್ರಗ್ರಹಣಗಳು ಕೆಲವು ನಕ್ಷತ್ರ ಮತ್ತು ರಾಶಿಗಳವರಿಗೆ ಕೆಟ್ಟ ಫಲಗಳನ್ನು ನೀಡಬಹುದು. ಆದಾಗ್ಯೂ, ಈ ಬಗ್ಗೆ ಭಯಪಡುವ ಅವಶ್ಯಕತೆ ಇರುವುದಿಲ್ಲ. ಇಷ್ಟದೇವತಾ ಆರಾಧನೆಯಿಂದ ಸರ್ವಕಷ್ಟಗಳನ್ನೂ ಪರಿಹರಿಸಿಕೊಳ್ಳಬಹುದು. ಅ.25 ರಂದು ಸ್ವಾತಿ ನಕ್ಷತ್ರದಲ್ಲಿ ಸೂರ್ಯನಿಗೆ ಕೇತು ಗ್ರಹಣ ಸಂಭವಿಸಲಿದೆ. ಈ ಗ್ರಹಣವು ಸ್ವಾತಿ, ಚಿತ್ರಾ, ವಿಶಾಖಾ, ಆರ್ದ್ರಾ, ಶತಭಿಷಾ ನಕ್ಷತ್ರದವರಿಗೂ ತುಲಾ, ಮೀನ, ವೃಶ್ಚಿಕ […]