ಮೂಡುಬಿದಿರೆ: ಆಳ್ವಾಸ್ ಕಾಲೇಜಿನಲ್ಲಿ ಸೂರ್‍ಯಗ್ರಹಣ ವೀಕ್ಷಣೆ
ಮೂಡುಬಿದಿರೆ: ಆಳ್ವಾಸ್ ಪದವಿ ಹಾಗೂ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದವತಿಯಿಂದ ಖಗೋಳ ಕೌತುಕದ ಕಂಕಣ ಸೂರ್‍ಯಗ್ರಹಣವನ್ನು ವೀಕ್ಷಿಸಲು ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ ಗುರುವಾರ ವ್ಯವಸ್ಥೆಯನ್ನು ಮಾಡಲಾಗಿತ್ತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಲವಾರು ದಶಕಗಳಿಗೊಮ್ಮೆ ನಡೆಯುವ ಬಾಹ್ಯಕಾಶದ ವಿಸ್ಮಯವನ್ನು ವೀಕ್ಷಿಸಿದರು. ಪ್ರೋಜೆಕ್ಟರ್ ಡಿಸ್‌ಪ್ಲೇಯ ಜತೆಯಲ್ಲಿ ಸೋಲಾರ್ ನೆಬ್ಯೂಲರ್ ಕನ್ನಡಕವನ್ನು ಧರಿಸಿ ವೀಕ್ಷಿಸಿದರು. ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಂಯೋಜಕ ಡಾ.ಶಶಿಧರ್ ಭಟ್ ವಿದ್ಯಾರ್ಥಿಗಳಿಗೆ ಸೂರ್‍ಯಗ್ರಹಣ ನಡೆಯುವ ಪರಿಯನ್ನು ಹಂತ ಹಂತವಾಗಿ ವಿವರಿಸಿದರು. ಕಾಲೇಜಿನ ಪ್ರಾಚಾರ್‍ಯ ಡಾ […]