ಶಿರೂರು ಮಠದ ಪೀಠಾಧಿಪತಿ ನೇಮಕ ವಿವಾದ: ನ್ಯಾಯಕ್ಕೆ ಸಂದ ಜಯ; ಸೋದೆ ಶ್ರೀ

ಉಡುಪಿ: ಶಿರೂರು ಮಠಕ್ಕೆ ಪೀಠಾಧಿಪತಿಗಳ ನೇಮಕ ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಂಡಿರುವ ವಿಷಯಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರು, ಇದು ನ್ಯಾಯಕ್ಕೆ ಸಂದ ಜಯ. 800 ವರ್ಷಗಳಿಂದ ನಡೆದುಬಂದಿರುವ ಹಾಗೂ ಮೂಲಗುರು ಮಧ್ವಾಚಾರ್ಯರು ಹಾಕಿಕೊಟ್ಟ ಸಂಪ್ರದಾಯಕ್ಕೆ ಹೈಕೋರ್ಟ್ ಮನ್ನಣೆ ನೀಡಿರುವುದು ಅತೀವ ಸಂತೋಷ ತಂದಿದೆ ಎಂದರು. ದ್ವಂದ್ವ ಮಠದ ನೆಲೆಯಲ್ಲಿ ಶಿರೂರು ಮಠದ ಆಡಳಿತವನ್ನು ಎರಡು ಮುಕ್ಕಾಲು ವರ್ಷ ಕಾಲ ನಿರ್ವಹಿಸಿ ಕಳೆದ ಮೇನಲ್ಲಿ ಶಿರೂರು ಮೂಲಮಠಕ್ಕೆ ವೇದವರ್ಧನ […]