ಮಂಜೇಶ್ವರ: ಸ್ನೇಹಾಲಯ ಮಾನಸಿಕ ಪುನರ್ವಸತಿ ಕೇಂದ್ರದಲ್ಲಿ ಸ್ನೇಹಾಲಯ ಫ್ಯಾಷನ್ ಫೆಸ್ಟ್
ಮಂಜೇಶ್ವರ: ಜು. 29 ರಂದು ಸ್ನೇಹಾಲಯ ಮಾನಸಿಕ ಪುನರ್ವಸತಿ ಕೇಂದ್ರದದಲ್ಲಿರುವವರಿಗಾಗಿ ‘ಸ್ನೇಹಾಲಯ ಫ್ಯಾಷನ್ ಫೆಸ್ಟ್’ ಅನ್ನು ಆಯೋಜಿಸಲಾಯಿತು. ಮಾನಸಿಕ ಅಸ್ವಸ್ಥರಿಗೆ ನಡೆದ ಈ ಫ್ಯಾಷನ್ ಫೆಸ್ಟ್, ದೇಶದಲ್ಲಿ ನಡೆದ ಮೊದಲ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಪಡೆಯಿತು. ಮಾತ್ರವಲ್ಲದೆ ರಾಂಪ್ ವಾಕ್ ನಡೆಸಿದ ಸ್ನೇಹಾಲಯದ 49 ನಿವಾಸಿಗಳ ಉತ್ಸಾಹ, ಆತ್ಮವಿಶ್ವಾಸ ಹಾಗೂ ಆಶಾವಾದಿತನ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಸ್ನೇಹಾಲಯದ ಸಂಸ್ಥಾಪಕರು ಹಾಗೂ ಟ್ರಸ್ಟಿಗಳು ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು. ಮಂಜೇಶ್ವರ ಶಾಸಕ ಎ.ಕೆ. ಎಮ್ ಅಶ್ರಫ್ ಹಾಗೂ ಬ್ರದರ್ ಜೋಸೆಪ್ […]