2 ಕೆಜಿ ಟೊಮೆಟೊ ಉಚಿತವಾಗಿ ಪಡೆಯಲು ಸ್ಮಾರ್ಟ್‌ಫೋನ್ ಖರೀದಿಸಿ
ಅಶೋಕನಗರ (ಮಧ್ಯಪ್ರದೇಶ): ಪ್ರಸ್ತುತ ಒಂದು ಕೆಜಿ ಟೊಮೆಟೊ 150ರಿಂದ 200ರವರೆಗೆ ಮಾರಾಟವಾಗುತ್ತಿದೆ. ಇದರಿಂದ ಗ್ರಾಹಕರು ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಆದರೆ ಈಗ ಮಾರುಕಟ್ಟೆಗೆ ಟೊಮೆಟೊ ಆವಕ ಇಳಿಕೆ ಕಂಡಿದೆ. ಆಹಾರ ದೈತ್ಯ ಮೆಕ್‌ಡೊನಾಲ್ಡ್ ತನ್ನ ಮೆನುವಿನಿಂದ ಟೊಮೆಟೊ ಅನ್ನು ಕೈಬಿಟ್ಟಿದೆ ಎಂಬುದರ ಕುರಿತು ವರದಿಯಾಗಿದೆ.ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಮುಖಿಯಾಗಿದೆ. ಟೊಮೆಟೊ ಬೆಲೆಯಂತೂ ತುಂಬಾ ಏರಿಕೆಯಾಗಿದೆ.ಮಧ್ಯಪ್ರದೇಶದ ಅಶೋಕನಗರದ ಮೊಬೈಲ್ ಅಂಗಡಿಯವರೊಬ್ಬರು ಸ್ಮಾರ್ಟ್‌ಫೋನ್ ಖರೀದಿಸಿದರೆ, ಎರಡು ಕೆಜಿ ಟೊಮೆಟೊವನ್ನು ಉಚಿತವಾಗಿ ನೀಡುತ್ತಿದ್ದಾರೆ. ಹಬ್ಬ ಹರಿದಿನಗಳಲ್ಲಿ ಗ್ರಾಹಕರನ್ನು ಸೆಳೆಯಲು ವಿಶೇಷ ರಿಯಾಯಿತಿ […]