ವಿನೂತನ ಕಾಂಪೋಸ್ಟ್ ಬೆಡ್ ನಿರ್ಮಿಸಿ ತ್ಯಾಜ್ಯ ವಿಲೇವಾರಿಯಲ್ಲಿ ರಾಜ್ಯಕ್ಕೆ ಮಾದರಿಯಾಯ್ತು ಉಡುಪಿ ಜಿಲ್ಲಾಧಿಕಾರಿ ವಸತಿಗೃಹ

ಉಡುಪಿ: ತ್ಯಾಜ್ಯ ವಿಲೇವಾರಿಯಲ್ಲಿ ರಾಜ್ಯಕ್ಕೆ ಮಾದರಿಯಾಗುವಂತಹ ಯೋಜನೆಗಳನ್ನು ರೂಪಿಸಿ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿರುವ ಜಿಲ್ಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉಡುಪಿ ಜಿಲ್ಲೆಯು ಪ್ರಸ್ತುತ ಮತ್ತೊಂದು ವಿನೂತನ ಸ್ವಚ್ಛತಾ ಕಾರ್ಯಕ್ರಮದ ಪ್ರಾಯೋಗಿಕ ಯೋಜನೆಗೆ ಜಿಲ್ಲಾಧಿಕಾರಿಗಳ ವಸತಿಗೃಹ ಸಾಕ್ಷಿಯಾಗಿದೆ. ಮನೆಯ ಕಾಂಪೌಂಡ್ ನಲ್ಲಿ ಬೀಳುವ ಒಣಕಸವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡುವ ವಿಧಾನವನ್ನು ಉಡುಪಿ ಜಿಲ್ಲಾಧಿಕಾರಿಗಳ ವಸತಿಗೃಹದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿದ್ದು, ವಸತಿಗೃಹದಲ್ಲಿನ ಕೈ ತೋಟದ ಒಣ ಹುಲ್ಲು, ತೋಟದ ಗಿಡಗಳಿಂದ ಬಿದ್ದಿದ್ದ ಗಿಡದ ಎಲೆಗಳು, ಮರದ ಮೇಲಿಂದ ಬಿದ್ದ […]