ಇಷ್ಟು ಮಾಡಿದ್ರೆ ರಾತ್ರಿ ಗ್ಯಾರಂಟಿ ಸುಖ ನಿದ್ರೆ ಬರುತ್ತೆ:ಮಲಗುವ ಮುನ್ನ ಏನ್ ಮಾಡ್ಬೇಕು?
ನಿದ್ರೆ ಮಾಡೋದು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹೆಚ್ಚಿನವರು ಕೇವಲ ದೇಹಕ್ಕೆ ಸುಸ್ತಾದಾಗ ಮಾತ್ರವಲ್ಲ ಮನಸ್ಸಿಗೆ ಸುಸ್ತಾದಾಗ ಅಂದರೆ ಬೇಜಾರಾದಾಗ, ಸಿಟ್ಟು ಬಂದಾಗ ನಿದಿರಾದೇವಿಯ ಮೊರೆ ಹೋಗಲಿಚ್ಛಿಸುತ್ತಾರೆ. ಹೌದು, ನಿದ್ರೆ ದೇಹಕ್ಕೂ ಮನಸ್ಸಿನಾರೋಗ್ಯಕ್ಕೂ ದಿವ್ಯೌಷಧ. ಶಾಂತಚಿತ್ತದಿಂದ ನಿದ್ರಿಸುವ ವ್ಯಕ್ತಿ ದೀರ್ಘಕಾಲ ಆರೋಗ್ಯವಂತನಾಗಿ ಬಾಳುತ್ತಾನೆ ಎಂದು ಅನೇಕ ಸಮೀಕ್ಷೆಗಳು ಹೇಳುತ್ತವೆ. ದಿನಕ್ಕೆ ಕನಿಷ್ಟ ಎಂಟು ಗಂಟೆಗಳ ನಿದ್ರೆ ಅವಶ್ಯಕ. ಸಾಧ್ಯವಾಗದಿದ್ದರೆ, ಕನಿಷ್ಠಪಕ್ಷ ಮಾಡುವ ಕೆಲವು ಗಂಟೆಗಳ ನಿದ್ರೆಯನ್ನಾದರೂ ನೆಮ್ಮದಿಯಿಂದ ಮಾಡಿದರೆ ಇಡೀ ದಿನ ಲವಲವಿಕೆಯಿಂದಿರಲು ಸಾಧ್ಯ. ಹಾಗಾದರೆ […]