ಎಸ್.ಕೆ.ಪಿ.ಎ ವತಿಯಿಂದ ಸಹಕಾರ ರತ್ನ ಜಯಕರ್ ಶೆಟ್ಟಿ ಇಂದ್ರಾಳಿ ಇವರಿಗೆ ಗೌರವಾಭಿನಂದನೆ
ಉಡುಪಿ: ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಜಯಕರ ಶೆಟ್ಟಿ ಇಂದ್ರಾಳಿ ಇವರಿಗೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯದಿಂದ ಗೌರವಾಭಿನಂದನೆ ಸಲ್ಲಿಸಲಾಯಿತು. ಜಯಕರ್ ಶೆಟ್ಟಿ ಇಂದ್ರಾಳಿ ಇವರು ಆರಂಭದಿಂದಲೂ ಛಾಯಾಗ್ರಾಹಕರ ಸಂಘಕ್ಕೆ ನೀಡಿರುವ ಸಹಕಾರಕ್ಕಾಗಿ ಸರ್ವ ಛಾಯಾಗ್ರಾಹಕರ ಪರವಾಗಿ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಉಡುಪಿ ಶಾಖೆಯ ಪ್ರಬಂಧಕ ರಾಘವೇಂದ್ರ ಉಪಾಧ್ಯಾಯ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ವಾಮನ ಪಡುಕೆರೆ, ಉಪಾಧ್ಯಕ್ಷ […]