ಪ್ರಕೃತಿಯ ವರದಾನ ತೆಂಗಿನೆಣ್ಣೆಯಿಂದ ಚಳಿಗಾಲದ ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ ಮುಕ್ತಿ ಹಾಡಿ
ಸಂಸ್ಕೃತದಲ್ಲಿ ನಾರೀಕೇಳವೆಂದು ಕರೆಸಿಕೊಳ್ಳುವ ಕಲಿಯುಗದ ಕಲ್ಪವೃಕ್ಷವೆಂಬ ತೆಂಗಿನಕಾಯಿಯ ಉಪಯೋಗಗಳು ಒಂದಲ್ಲ ಎರಡಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಮೊದಲನೆ ಸ್ಥಾನ ಗೋವಿಗಾದರೆ ಎರಡನೆ ಸ್ಥಾನ ತೆಂಗಿನಕಾಯಿಗೆ ಮೀಸಲು. ಗೋವು ಮತ್ತು ತೆಂಗಿನಕಾಯಿಯ ಪ್ರತಿಯೊಂದು ಅಂಶಗಳೂ ಬಹುಉಪಯೋಗಿ. ಪ್ರಕೃತಿ ಮನುಕುಲಕ್ಕೆ ನೀಡಿದ ಅತ್ಯಂತ ಉತ್ಕೃಷ್ಟ ಉಡುಗೊರೆಗಳೆಂದರೆ ಅದು ಗೋವಿನ ಹಾಲು ಮತ್ತು ತೆಂಗಿನಎಣ್ಣೆ. ತೆಂಗಿನೆಣ್ಣೆಯ ವಿಶಿಷ್ಟತೆ ಉಷ್ಣವಲಯದ ಪ್ರಾಕೃತಿಕ ಬೆಳೆಯಾಗಿರುವ ತೆಂಗಿನೆಣ್ಣೆಯ ವಿಶಿಷ್ಟತೆ ಒಂದೆರೆಡಲ್ಲ. # ಲಾರಿಕ್ ಆಸಿಡ್ ಅನ್ನು ಹೊಂದಿರುವುದರಿಂದ ಉತ್ತಮವಾದ ಚರ್ಮ-ಸ್ನೇಹಿ ಕೊಬ್ಬಿನಾಮ್ಲವಾಗಿದೆ # ಒಲೀಕ್ ಆಸಿಡ್ ಅನ್ನು […]