ಮಾ.21: ನಂದಳಿಕೆ ಸಿರಿ ಜಾತ್ರೆ, ಆಯನೋತ್ಸವ
ಬೆಳ್ಮಣ್: ತುಳುನಾಡಿ ನಾದ್ಯಂತ ನೆಲೆಗೊಂಡಿರುವ ಸಕಲ ಸಿರಿ ಕ್ಷೇತ್ರಗಳಿಗೆ ಪುರಾತನ ಮತ್ತು ಮಿಗಿಲೆನಿ ಸಿರುವ ಸತ್ಯದ ಸಿರಿಗಳ ಪುಣ್ಯಕ್ಷೇತ್ರ ಕಾರ್ಕಳ ತಾಲೂಕಿನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಳದ ಸನ್ನಿಧಾನದಲ್ಲಿ ಸಿರಿ ಜಾತ್ರೆ ಮಾ. 21ರಂದು ಸಡಗರದಿಂದ ನಡೆಯಲಿದೆ. ತುಳುನಾಡು, ಮಲೆನಾಡು, ಕರ್ನಾಟಕದಾದ್ಯಂತ ಮಹಾರಾಷ್ಟ್ರದಂತಹ ಹೊರನಾಡುಗಳಿಂದ ವಿದೇಶಗಳಿಂದಲೂ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದು, ಭಕ್ತರ ಸೇವೆಗಾಗಿ ಸಮಗ್ರ ನಂದಳಿಕೆ ತಯಾರಾಗಿದೆ. ಮಾ. 21ರಂದು ಬೆಳಗ್ಗೆ 8ರಿಂದ ಶ್ರೀ ಉರಿಬ್ರಹ್ಮ ರಜತ ಪಾದುಕೆ, ಶ್ರೀ ಅಬ್ಬಗ-ದಾರಗರ ಚೆನ್ನೆಮಣಿಗಳ […]