ಅರಮನೆ ನಗರಿಯನ್ನು ಕಡಲ ತಡಿಗೆ ಬೆಸೆವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಗೆ ಮುರ್ಡೇಶ್ವರದಲ್ಲಿ ಭರ್ಜರಿ ಸ್ವಾಗತ

ಬೈಂದೂರು: ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮಂಗಳೂರು ಎಕ್ಸ್ ಪ್ರೆಸ್ ಗೆ ಮುರ್ಡೇಶ್ವರದಲ್ಲಿ ರೈಲ್ವೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಭರ್ಜರಿ ಸ್ವಾಗತವನ್ನು ನೀಡಿದರು. ಈ ರೈಲನ್ನು ಮುರ್ಡೇಶ್ವರದವರೆಗೆ ವಿಸ್ತರಿಸಲಾಗಿದ್ದು, ಸೆಪ್ಟೆಂಬರ್ 17 ರ ಭಾನುವಾರದಂದು ಮಂಗಳೂರು ಸೆಂಟ್ರಲ್‌ನಿಂದ ಮೊದಲ ಪ್ರಯಾಣ ಕೈಗೊಂಡಿದೆ. ಮೈಸೂರು ಮೂಲಕ ರೈಲು ಸಂಚರಿಸಲಿದೆ. ಮಧ್ಯಾಹ್ನ 1.35ಕ್ಕೆ ದೇವಸ್ಥಾನ ನಗರಿ ಮುರ್ಡೇಶ್ವರ ತಲುಪುತ್ತಿದ್ದಂತೆ ಉತ್ತರ ಕನ್ನಡ ರೈಲ್ವೆ ಸಮಿತಿ ಅಧ್ಯಕ್ಷ ಜಾರ್ಜ್ ಫೆರ್ನಾಂಡಿಸ್ ಸದಸ್ಯರೊಂದಿಗೆ ಡೊಳ್ಳು ಬಾರಿಸಿ ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ರಾಜೀವ್ ಗಾಂವ್ಕರ್ […]