ಸಿದ್ದರಾಮಯ್ಯನವರೇ ಮುಸಲ್ಮಾನರ ಮೇಲಿನ ಕಾಳಜಿ, ಗಂಗೊಳ್ಳಿಯ ಮೀನುಗಾರರ ಮೇಲೆ ಯಾಕೆ ಇರಲಿಲ್ಲ; ಸುನೀಲ್ ಕೆ.ಆರ್ ಪ್ರಶ್ನೆ
ಉಡುಪಿ: ಸಿದ್ದರಾಮಯ್ಯನವರೇ ಮುಸಲ್ಮಾನರ ಮೇಲೆ ಇರುವ ಅನುಕಂಪ, ಕಾಳಜಿ. ಗಂಗೊಳ್ಳಿಯ ಮೀನುಗಾರರ ಮೇಲೆ ಯಾಕೆ ಇರಲಿಲ್ಲ ಎಂದು ಭಜರಂಗದಳ ಪ್ರಾಂತ ಸಂಚಾಲಕ ಸುನೀಲ್ ಕೆ. ಆರ್ ಪ್ರಶ್ನಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಹತ್ಯೆ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ಗಂಗೊಳ್ಳಿಯಲ್ಲಿ ಮರುದಿನವೇ ಮುಸಲ್ಮಾನರು ಹಿಂದುಗಳ ಮೀನು ಖರೀದಿಗೆ ಬಹಿಷ್ಕಾರ ಹಾಕಿದರು. ಆಗ ಸಿದ್ದರಾಮ್ಯಯ್ಯ ಏಕೆ ಮೌನವಾಗಿದ್ದರು ಎಂದರು. ನೀವು ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಸವರುವ ಕೆಲಸ ಮಾಡಬೇಡಿ. ನೀವು ರಾಜಕೀಯ ಮಾಡಿ. […]