ಉಡುಪಿ: ಶ್ಯಾಮ್‌ಪ್ರಸಾದ್ ಮುಖರ್ಜಿ ಸಂಸ್ಮರಣೆ: ರಾಷ್ಟ್ರದ ಅಖಂಡತೆಗಾಗಿ‌ ಜನಸಂಘ ಸ್ಥಾಪನೆ: ಕೆ.‌ ರಘುಪತಿ ಭಟ್ 

ಉಡುಪಿ: ದೇಶದ ಸ್ವಾತಂತ್ರ್ಯ ಸಂದರ್ಭದಲ್ಲಿ ಅಂದಿನ ಪ್ರಧಾನಿ ಜವಹರ್‌ ಲಾಲ್‌ ನೆಹರೂ ಅವರ ಕೆಲವು‌ ತಪ್ಪು ನೀತಿಗಳಿಂದಾಗಿ  ಡಾ. ಶ್ಯಾಮಪ್ರಸಾದ್‌ ಅವರು ಬೇಸತ್ತಿದ್ದರು. ಹೀಗಾಗಿ ಅಧಿಕಾರದಿಂದ ಹೊರಬಂದ ಅವರು, ದೂರದೃಷ್ಟಿಯಿಂದ ರಾಷ್ಟ್ರದ ಅಖಂಡತೆಗಾಗಿ ಜನಸಂಘವನ್ನು ಸ್ಥಾಪಿಸಿದ್ದಾರೆ. ಡಾ. ಶ್ಯಾಮಪ್ರಸಾದ್‌ ಮುಖರ್ಜಿ ಅವರು ಹಾಗೂ ಪಂ. ದೀನದಯಾಳ್‌ ಉಪಾಧ್ಯಾಯ ಅವರು ದೇಶದ ಅಖಂಡತೆಗಾಗಿ ಬಲಿದಾನ ಮಾಡಿದ್ದಾರೆ ಎನ್ನುವುದನ್ನು ನಾವೆಲ್ಲರು ತಿಳಿದುಕೊಳ್ಳಬೇಕು ಎಂದು ಶಾಸಕ ಕೆ. ರಘುಪತಿ ಭಟ್‌ ಹೇಳಿದರು. ಜನಸಂಘದ ಸ್ಥಾಪಕ ಅಧ್ಯಕ್ಷ ಡಾ. ಶ್ಯಾಮಪ್ರಸಾದ್‌ ಮುಖರ್ಜಿ ಬಲಿದಾನ […]