ಉಡುಪಿ: ಶ್ಯಾಮ್‌ಪ್ರಸಾದ್ ಮುಖರ್ಜಿ ಸಂಸ್ಮರಣೆ: ರಾಷ್ಟ್ರದ ಅಖಂಡತೆಗಾಗಿ‌ ಜನಸಂಘ ಸ್ಥಾಪನೆ: ಕೆ.‌ ರಘುಪತಿ ಭಟ್ 

ಉಡುಪಿ: ದೇಶದ ಸ್ವಾತಂತ್ರ್ಯ ಸಂದರ್ಭದಲ್ಲಿ ಅಂದಿನ ಪ್ರಧಾನಿ ಜವಹರ್‌ ಲಾಲ್‌
ನೆಹರೂ ಅವರ ಕೆಲವು‌ ತಪ್ಪು ನೀತಿಗಳಿಂದಾಗಿ  ಡಾ. ಶ್ಯಾಮಪ್ರಸಾದ್‌ ಅವರು ಬೇಸತ್ತಿದ್ದರು. ಹೀಗಾಗಿ ಅಧಿಕಾರದಿಂದ ಹೊರಬಂದ ಅವರು, ದೂರದೃಷ್ಟಿಯಿಂದ ರಾಷ್ಟ್ರದ ಅಖಂಡತೆಗಾಗಿ ಜನಸಂಘವನ್ನು ಸ್ಥಾಪಿಸಿದ್ದಾರೆ. ಡಾ. ಶ್ಯಾಮಪ್ರಸಾದ್‌ ಮುಖರ್ಜಿ ಅವರು ಹಾಗೂ ಪಂ. ದೀನದಯಾಳ್‌ ಉಪಾಧ್ಯಾಯ ಅವರು ದೇಶದ ಅಖಂಡತೆಗಾಗಿ ಬಲಿದಾನ ಮಾಡಿದ್ದಾರೆ ಎನ್ನುವುದನ್ನು ನಾವೆಲ್ಲರು ತಿಳಿದುಕೊಳ್ಳಬೇಕು ಎಂದು ಶಾಸಕ ಕೆ. ರಘುಪತಿ ಭಟ್‌ ಹೇಳಿದರು.
ಜನಸಂಘದ ಸ್ಥಾಪಕ ಅಧ್ಯಕ್ಷ ಡಾ. ಶ್ಯಾಮಪ್ರಸಾದ್‌ ಮುಖರ್ಜಿ ಬಲಿದಾನ ದಿನಾಚರಣೆ ಪ್ರಯುಕ್ತ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೆಹರೂ ಅವರ ಓಲೈಕೆ ರಾಜಕಾರಣ ನಡೆಸಿದ ‌ಪರಿಣಾಮ ದೇಶ ಹಲವು ಸಮಸ್ಯೆ ಎದುರಿಸುವಂತಾಗಿತ್ತು.  ಹೀಗಾಗಿ ಸಮರ್ಥ ಸರಕಾರದ ನೀತಿಗಳ ವಿರುದ್ಧ ಮುಖರ್ಜಿ
ಅವರು ಹೋರಾಡಿದ್ದರು. ಸೋಲುವ ಬಗ್ಗೆ ತಿಳಿದಿದ್ದರೂ ಪಕ್ಷದ ಪ್ರಾತಿನಿಧ್ಯಕ್ಕೋಸ್ಕರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರು. ಅವರ ತ್ಯಾಗ ಮತ್ತು ಪರಿಶ್ರಮ ಇಂದಿನವರಿಗೆ ಮಾದರಿ. ಆ ವಿಚಾರಧಾರೆಗಳನ್ನು‌ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಉಪಸ್ಥಿತರಿದ್ದರು. ಪ್ರ. ಕಾರ್ಯದರ್ಶಿ
ಕುಯಿಲಾಡಿ ಸುರೇಶ್‌ ನಾಯಕ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.